Ticker

6/recent/ticker-posts

Ad Code

ಶ್ರೀಗಂಧದ ಮರ ಕಡಿದ ಪ್ರಕರಣದಲ್ಲಿ ಕರ್ಮಂತ್ತೋಡಿಯ ಮೀನು ಮಾರಾಟಗಾರನ ಬಂಧನ

 

ಮುಳ್ಳೇರಿಯ : ಇಲ್ಲಿನ‌ ರಕ್ಷಿತಾರಣ್ಯದಿಂದ  ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡಿದ ಪ್ರಕರಣದಲ್ಲಿ ಮೀನು ಮಾರಾಟಗಾರನೋರ್ವನನ್ನು ಅರಣ್ಯ ಇಲಾಖೆ ಸೆಕ್ಷನ್ ಆಫೀಸರ್ ಕೆ.ಎ.ಬಾಬು ಮತ್ತು ಅವರ ತಂಡ ಬಂಧಿಸಿದೆ. ಕಾರಡ್ಕದ  ಕರ್ಮಂತೋಡಿಯ ಕುಂಞಾಲಿ (66) ಬಂಧಿತ ಆರೋಪಿ.  ಪ್ರಕರಣದ ಮೊದಲ ಆರೋಪಿ ಕುಂಡಡುಕ್ಕದ ಮಣಿ ಅವರನ್ನು ಒಂದು ವಾರದ ಹಿಂದೆ ಬಂಧಿಸಲಾಗಿತ್ತು. ಅವರ ಹೇಳಿಕೆಯ ಆಧಾರದ ಮೇಲೆ ಕುಂಞಾಲಿಯನ್ನೂ ಬಂಧಿಸಲಾಗಿದೆ. ಕಡಿದ ಶ್ರೀಗಂಧದ ಮರಗಳನ್ನು ಮೀನು ಮಾರಾಟಗಾರ ಕುಂಞಾಲಿಗೆ ಮಾರಾಟ ಮಾಡಿರುವುದಾಗಿ ಮಣಿ ಹೇಳಿಕೆ ನೀಡಿದ್ದ. ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳು ಒಳಗೊಂಡಿದ್ದು,  ಬಂಧಿಸುವ ಸೂಚನೆಗಳಿವೆ. ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕುಂಡಡ್ಕ ಅರಣ್ಯದಿಂದ 3 ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಬಂಧಿಸಿದ ಮಣಿಯನ್ನು ಆರೋಪಿಯನ್ನಾಗಿಸಿ ನ್ಯಾಯಾಲಯವು ರಿಮಾಂಡ್ ಮಾಡಿದೆ.

Post a Comment

0 Comments