ಅಡ್ಯನಡ್ಕ : ಅಕ್ಷಯ ಕೇಂದ್ರ ಚವರ್ಕಾಡ್, ಅಡ್ಯನಡ್ಕದಲ್ಲಿ ಜನವರಿ 9 ಶುಕ್ರವಾರದಂದು ಪೂರ್ವಾಹ್ನ 11.00 ಗಂಟೆಯಿಂದ ಉಚಿತ ಪಿ.ಎಸ್.ಸಿ. ರಿಜಿಸ್ಟ್ರೇಶನ್ ಶಿಬಿರವನ್ನು ಆಯೋಜಿಸಲಾಗಿದೆ. ಅರ್ಹ ಉದ್ಯೋಗಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅಕ್ಷಯ ಸಂದರ್ಶಿಸಿದಲ್ಲಿ ಉಚಿತವಾಗಿ ರಿಜಿಸ್ಟ್ರೇಶನ್ ಮಾಡಬಹುದಾಗಿದೆ. ಇದು ಈ ಅಕ್ಷಯದವರು ಆಯೋಜಿಸಿರುವ ಉಚಿತ ಸೇವಾ ಯೋಜನೆಯಾಗಿದೆ. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಕಾರ್ಯಕ್ರಮ ಉದ್ಘಾಟಿಸುವರು. ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ಐತಪ್ಪ ಕುಲಾಲ್ ಅಧ್ಯಕ್ಷತೆ ವಹಿಸುವರು. ಪಂ.ಸದಸ್ಯೆ ಪ್ರಮೀಳಾ ನಾಯ್ಕ್. ಅಕ್ಷಯಾ ಬ್ಲೋಕ್ ಕೋರ್ಡಿನೇಟರ್ ಶ್ರೀನಿವಾಸ ಪೆರಿಕ್ಕಾನ, ಎಂ ಎಚ್ ಆರೀಸ್, ಮಿಸ್ರಿಯಾ ಉಪಸ್ಥಿತರಿರುವರು. ಸಾರ್ವಜನಿಕ ಉದ್ಯೋಗಾರ್ಥಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.

0 Comments