Ticker

6/recent/ticker-posts

Ad Code

ಕುಂಬ್ಡಾಜೆಯಲ್ಲಿ ಹಿಂದೂ ಸಮಾಜೋತ್ಸವ ; ನಾಳೆ ಆಮಂತ್ರಣ ಪತ್ರಿಕೆ ಹಾಗೂ ಲಾಂಛನ ಬಿಡುಗಡೆ

 

ಮಾರ್ಪನಡ್ಕ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷಾಚರಣೆಯಂಗವಾಗಿ ಕು೦ಬ್ಬಾಜೆ ಪ೦ಚಾಯತ್ ಸಮಿತಿ ನೇತೃತ್ವದಲ್ಲಿ ಜಯನಗರದಲ್ಲಿ  ಫೆ.22ರಂದು  ಅಪರಾಹ್ನ 3 ಗಂಟೆಯಿಂದ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಈಗಾಗಲೇ ಸ್ವಾಗತ ಸಮಿತಿ ರಚನೆ ಹಾಗೂ ಮಹಿಳಾ ಸಮಿತಿ ನೇತೃತ್ವದಲ್ಲಿ ಮಾತೃ ಸಂಗಮ ಕಾರ್ಯಕ್ರಮ ಜರಗಿದೆ. ಇದರ ಆಮಂತ್ರಣ ಪತ್ರಿಕೆ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮ ಫೆ.1ಕ್ಕೆ ಬೆಳಗ್ಗೆ 9.30ಕ್ಕೆ ಮವ್ವಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಜರಗಲಿದೆ. ದೈವ ನರ್ತಕ ರಾಮ ಕೆ ಮಣ್ಣಾಪು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸುವರು. ಹಿರಿಯ ಭಜನಾ ಸಂಕೀರ್ತನಕಾರ ರಾಮ ಮೂಲ್ಯ ಬಾಳೆಗದ್ದೆ ಲಾಂಛನ ಬಿಡುಗಡೆಗೊಳಿಸುವರು.ಕರ್ನಾಟಕ ಜನಪದ ಲೋಕ ಪ್ರಶಸ್ತಿ ವಿಜೇತ ಮನು ಪಣಿಕ್ಕರ್ ಬೆದ್ರಡಿ ಮುಖ್ಯ ಅತಿಥಿಗಳಾಗಿರುವರು.

Post a Comment

0 Comments