Ticker

6/recent/ticker-posts

Ad Code

ಕುಂಬಳೆ ಪೋಲಿಸರಿಂದ ವ್ಯಾಪಕ ಮರಳು ಭೇಟೆ : ಪುತ್ತಿಗೆಯಿಂದ ಐದು ಮಂದಿಯ ಬಂಧನ, ಉಳುವಾರಿನಲ್ಲಿ ದೋಣಿ ವಶ

 

ಕುಂಬಳೆ: ಅನಧಿಕೃತ ಮರಳು ಸಾಗಾಟ ವ್ಯಾಪಕಗೊಂಡಿದೆ ಎಂಬ ದೂರಿನಂತೆ ಕುಂಬಳೆ ಪೋಲಿಸರಿಂದ ಮರಳು ಭೇಟೆ ತೀವ್ರಗೊಂಡಿದೆ. ಇದರನ್ವಯ ಪುತ್ತಿಗೆ ನದಿಯಿಂದ ಬೊಲೆರೊ ಪಿಕಪ್ ವಾಹನದಲ್ಲಿ ಮರಳು ಸಾಗಿಸುತ್ತಿದ್ದ ಐದು ಮಂದಿಯನ್ನು ಬಂಧಿಸಲಾಗಿದೆ.  ಅಂಗಡಿಮುಗೇರ್ ನಿವಾಸಿ ಅಬ್ದುಲ್ ಫೈಸಲ್ (36), ಪೆರಿಯ ಮೊಗರ್ ಹೌಸ್‌ನ ಅಬ್ದುಲ್ ಅಜೀಜ್ (38) ಮತ್ತು ಅಬ್ದುಲ್ ರಜಾಕ್ (40), ಪುಳಕ್ಕರ ಹೌಸ್‌ನ ಅಂಗಡಿಮುಗೇರ್ ನ ಅಬ್ದುಲ್ ಫತ್ತಾಹ್ (21) ಮತ್ತು ಶೇರುಲಾಬಾದ್ ಹೌಸ್‌ನ ಎಸ್‌ಎ ಖಾಲಿದ್ (45) ಎಂಬವರನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಮತ್ತು ಎಎಸ್‌ಐ ಅತುಲ್ ರಾಜ್ ಅವರ ತಂಡ ಬಂಧಿಸಿದೆ. ಪುತ್ತಿಗೆ ಸೇತುವೆ ಬಳಿಯಿಂದ ಬೊಲೆರೊದಲ್ಲಿ ಮರಳು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಕಾರ್ಯಚರಣೆ ನಡೆಸಿದೆ. ಬಳಿಕ ಉಳುವಾರ ನದಿಯ ಮಾಕೂರಿನಲ್ಲಿ ಅಕ್ರಮ ಮರಳು ತೆಗೆಯಲು ಬಳಸುತ್ತಿದ್ದ ದೋಣಿಯನ್ನು ವಶಪಡಿಸಿಕೊಂಡು ಜೆಸಿಬಿ ಬಳಸಿ ಅದನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments