ಕುಂಬಳೆ: ಮನನೊಂದು ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಕುಂಬಳೆ ಆರಿಕ್ಕಾಡಿ ಸಮೀಪದ ಬಾಬು ಎಂಬವರ ಪುತ್ರ ಸಂತೋಷ್(30) ಮೃತ ವ್ಯಕ್ತಿ. ನಿನ್ನೆ ರಾತ್ರಿ ಮಲಗುವ ಕೋಣೆಗೆ ತೆರಳಿದ ಇವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರೀಲ್ಸ್ ಚಿತ್ರೀಕರಣ ಮೂಲಕ ಜನಪ್ರಿಯನಾಗಿದ್ದ ಈತ ಶುಕ್ರವಾರ ರೀಲ್ಸ್ ಚಿತ್ರೀಕರಿಸುವಾಗ ಸಂಭವಿಸಿದ ಎಡವಟ್ಟಿನಿಂದ ತುಂಬಾ ನೊಂದುಕೊಂಡಿದ್ದ ಎಂದು ಈತನ ಸ್ನೇಹಿತ ವರ್ಗದವರು ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದೆ ಎಂಬ ಸಂಶಯ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಕಂಡು ಬಂದಿಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿದೆ. ಪ್ರಕರಣ ಕುಂಬಳೆ ಠಾಣೆಯಲ್ಲಿ ದಾಖಲಾಗಿದೆ.

0 Comments