Ticker

6/recent/ticker-posts

Ad Code

ಕರ್ನಾಟಕದ ಕೊಳ್ಳೆಗಾಲದಲ್ಲಿ ಕೇರಳ ಲಾಟರಿ ಅಕ್ರಮ ಮಾರಾಟ : ಒರ್ವನ ಸೆರೆ


ಕೇರಳ ಲಾಟರಿಗಳನ್ನು ಕೊಳ್ಳೆಗಾಲದಲ್ಲಿಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು  ಅಗರ ಮಾಂಬಳ್ಳಿ ಠಾಣೆಯ ಪೊಲೀಸರು ಬಂಧಿಸಿದ ಪ್ರಕರಣ ವರದಿಯಾಗಿದೆ. ಅಗರ ಗ್ರಾಮದ ಕುಮಾರ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಐವತ್ತು ರೂ ಮುಖ ಬೆಲೆಯ 80 ಕೇರಳ ಲಾಟರಿಗಳನ್ನು ಜಪ್ತಿ ಮಾಡಲಾಗಿದೆ. ಈತನು ಬನ್ನಿಸಾರಿಗೆ ರಸ್ತೆಯಲ್ಲಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದುದನ್ನು ಖಚಿತ ಪಡಿಸಿಕೊಂಡ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Post a Comment

0 Comments