Ticker

6/recent/ticker-posts

Ad Code

ದುಬೈಯಲ್ಲಿ ಮಾರ್ಗದೀಪ ಪ್ರೀಮಿಯರ್ ಲೀಗ್ ಸೀಸನ್ 4 ಕ್ರಿಕೆಟ್ ಪಂದ್ಯಾಟಕ್ಕೆ ಸಿದ್ಧತೆ

 

ದುಬೈ : ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ  ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ ನಡೆಯುವ ಮಾರ್ಗದೀಪ ಪ್ರೀಮಿಯರ್ ಲೀಗ್-4  ಕ್ರಿಕೆಟ್ ಟೂರ್ನಮೆಂಟ್ ನ ಜರ್ಸಿ ಬಿಡುಗಡೆ ಇತ್ತೀಚೆಗೆ ನಡೆಯಿತು. ದುಬೈನ ಎಂ.ಎಂ.ಸಿ.ಟಿ. ಗ್ರೌಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ರೋಷನ್ ಕಂಪ, ರಾಮಕ್ಷತ್ರಿಯ ಸಂಘ ಯುಎಇ ಅಧ್ಯಕ್ಷರಾದ ಇಶ್ವರ್ ಬಲ್ಕಿ, ರಕ್ಷಿತ್ ಪುತ್ತೂರು, ರೇಷ್ಮಾ ಹಾಗೂ ವೇದ ಮುಖ್ಯ ಅತಿಥಿಗಳಾಗಿದ್ದರು. ಯೂಟ್ಯೂಬರ್ ಸಂತೋಷ್ ಶೆಟ್ಟಿ ಪೊಳಲಿ ಜರ್ಸಿ ಬಿಡುಗಡೆಗೊಳಿಸಿದರು.    

ಮಹೇಶ್ ಚಂದ್ರಗಿರಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಗಂಧರಾಜ ಬೇಕಲ್ ಸ್ವಾಗತಿಸಿ, ಹರಿಕೋಟೆ ನಿರೂಪಿಸಿದರು. ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ  ಉಪಾಧ್ಯಕ್ಷರಾದ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಸುನೀಲ್ ರಾವ್, ರಾಜೇಶ್ ರಾವ್, ಅಜೀತ್ ಕೊರಕಾಡ್ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಸ್ಪೋರ್ಟ್ಸ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುದುರೆಕೋಡು ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿದರು. ಫೆಬ್ರವರಿ ಒಂದರಂದು ಶಾರ್ಜಾದ ಬತಾಯ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.

Post a Comment

0 Comments