ಮಂಜೇಶ್ವರ : ಲಕ್ಕಿ ಬ್ರದರ್ಸ್ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ದಾರುಸ್ಸಲಮ್ ಚಾರಿಟಿ ವಿಂಗ್ ನ ಸಂಯುಕ್ತ ಆಶ್ರಯದಲ್ಲಿ ಬಂಗ್ರಮಂಜೇಶ್ವರದಲ್ಲಿ ನಿರ್ಮಿಸಿದ ನೂತನ ಕಟ್ಟಡ ಲೋಕಾರ್ಪಣೆಗೊಂಡಿತು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ 'ಮಂಜೇಶ್ವರದ ಮಣ್ಣಿನಲ್ಲಿ ಸರ್ವಧರ್ಮ ಸಮನ್ವಯತೆಯ ದ್ಯೋತಕವಾಗಿ ನಾಡಿನ ಪ್ರತಿಭೆಗಳನ್ನು ಪರಿಚಯಿಸುತ್ತಾ ಸಾಂಸ್ಕೃತಿಕ, ಸಾಮಾಜಿಕವಾಗಿ ತೆರೆದುಕೊಂಡ ಸಂಸ್ಥೆಗೆ ಸ್ವಂತ ಕಟ್ಟಡದ ಕನಸು ನನಸಾಗಿದೆ ಇನ್ನೂ ಅನೇಕ ಯೋಜನೆಗಳನ್ನು ಕೈಗೊಳ್ಳುವಂತಾಗಲಿ' ಎಂದು ಹಾರೈಸಿದರು.
ನಟ, ನಿರ್ಮಾಪಕ, ಕೊಡುಗೈದಾನಿ ಅಸ್ತ್ರ ಗ್ರೂಫ್ ಮಹಾ ನಿರ್ದೇಶಕ ಲಂಚುಲಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ 'ಸಮಾಜದ ಕಾರುಣ್ಯ ಯೋಜನೆಗಳೊಂದಿಗೆ ಕೈ ಜೋಡಿಸಲು ಸಂಘಟನೆಗಳು ಅತೀ ಮುಖ್ಯ' ಎಂದರು. ಅತಾವುಲ್ಲ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಕ್ಲಬ್ ಸದಸ್ಯರು, ಚಾರಿಟಿ ವಿಂಗ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


0 Comments