Ticker

6/recent/ticker-posts

Ad Code

ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಆಮದು ಅಭ್ಯರ್ಥಿಗಳಿಗೆ ಅಭ್ಯಂತರ : ತೀವ್ರ ಚರ್ಚೆಯಲ್ಲಿ ಡಿಸಿಸಿ

 

ಕಾಸರಗೋಡು: ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಆಮದು  ಅಭ್ಯರ್ಥಿಗಳಿಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯ ಮೂಡಿ ಬಂದಿದೆ. ಕಳೆದ ದಿನ ನಡೆದ ಡಿಸಿಸಿ ಸದಸ್ಯರು ಮತ್ತು ಬ್ಲಾಕ್ ಪದಾಧಿಕಾರಿಗಳ ಸಭೆಯಲ್ಲಿ ಇಂತಹ ಅಭಿಪ್ರಾಯ ವ್ಯಕ್ತವಾಗಿತ್ತು. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ  ಹೆಚ್ಚಿನ ನಿರೀಕ್ಷೆಗಳಿವೆ ಎಂದು ಸಭೆ ನಿರ್ಣಯಕ್ಕೆ ಬಂದಿದೆ.  ಈ ಮಧ್ಯೆ, ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಯಾರು ಎಂಬುದರ ಕುರಿತು ಚರ್ಚೆಗಳು ಸಕ್ರಿಯವಾಗಿವೆ. 

ಉದುಮದಲ್ಲಿ ಬಿ.ಪಿ. ಪ್ರದೀಪ್ ರ ಹೆಸರಿಗೆ ಆದ್ಯತೆ ನೀಡಲಾಗಿದೆ.  ಹಕೀಮ್ ಕುನ್ನಿಲ್  ಅವರ ಹೆಸರೂ ಚರ್ಚೆಯಲ್ಲಿದೆ.  ರಾಜಮೋಹನ್ ಉಣ್ಣಿತ್ತಾನ್ ಅವರ ಹೆಸರು ಕೇಳಿ ಬಂದಿದ್ದರೂ, ಸಂಸದರು  ವಿಧಾನಸಭಾ ಚುನಾವಣೆಯಲ್ಲಿ    ಸ್ಪರ್ಧಿಸಬಾರದು ಎಂದು ನಿರ್ಧರಿಸಿದ ನಂತರ ಆ ಸಾಧ್ಯತೆಯನ್ನು ತೆಗೆದು ಹಾಕಲಾಯಿತು. ಕಾಞಂಗಾಡ್ ಮಂಡಲದಲ್ಲಿ  ಕಾಂಗ್ರೆಸ್ ನಾಯಕ ರಾಜು ಕಟ್ಟಕಾಯತ್ ಮತ್ತು ಕಾಞಂಗಾಡ್‌ನ ಪಿ.ವಿ. ಸುರೇಶ್ ಕುಮಾರ್ ಅವರ ಹೆಸರುಗಳು ಪರಿಗಣನೆಗೆ ಬಂದಿವೆ. ಇನ್ನು ಉಳಿದಂತೆ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅವರನ್ನು ಅಭ್ಯರ್ಥಿಯನ್ನಾಗಿಸಬೇಕೆಂಬ ಅಭಿಪ್ರಾಯವೂ  ಪಕ್ಷದಲ್ಲಿ ಕೇಳಿ ಬರುತ್ತಿದೆ ಎನ್ನಲಾಗಿದೆ.

Post a Comment

0 Comments