Ticker

6/recent/ticker-posts

Ad Code

ದಾಖಲೆಗಳಿಲ್ಲದ 11.34 ಲಕ್ಷ ರೂ. ಕಳ್ಳಸಾಗಣೆ : ಯುವಕನ ಸೆರೆ

 

ಕಾಸರಗೋಡು : ದಾಖಲೆಗಳಿಲ್ಲದೆ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 11.34 ಲಕ್ಷ ರೂ.ಗಳನ್ನು ಜಿಲ್ಲಾ ಅಪರಾಧ ದಳ ಮತ್ತು ಅಂಬಲತ್ತರ ಪೊಲೀಸರು ಜಂಟಿಯಾಗಿ ಸೆರೆ ಹಿಡಿದಿದ್ದಾರೆ. ಪ್ರಕರಣದಲ್ಲಿವ ಯುವಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಕಲ್ಲಂತೋಲ್ ನಿವಾಸಿ  ಸಿ.ಎಚ್. ಅಬ್ಬಾಸ್ (40) ಬಂಧಿತ ಆರೋಪಿ. ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ದೊರೆತ ಗೌಪ್ಯ ಮಾಹಿತಿಯ ಆಧಾರದ ಮೇಲೆ, ಜಿಲ್ಲಾ ಅಪರಾಧ ದಳ ಮತ್ತು ಅಂಬಲತ್ತರ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಅಂಬಲತ್ತರ ಪೊಲೀಸ್ ಠಾಣೆ ಮುಂಭಾಗದ ಎಸ್‌ಎಚ್ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಕಳ್ಳಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ವಶಪಡಿಸಿಕೊಂಡ ಹಣದೊಂದಿಗೆ ಅಬ್ಬಾಸ್‌ನನ್ನು ಹೊಸದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Post a Comment

0 Comments