Ticker

6/recent/ticker-posts

Ad Code

ಮಕ್ಕಳ ಬಾಳಿಗೆ ಮರೆಯಲಾರದ ಪ್ರವಾಸ ಏರ್ಪಡಿಸಿ ಮಾದರಿಯಾದ ಶಿಕ್ಷಕರು

 

ಕೈಯಲ್ಲಿ ಫ್ಲೈಟ್ ಟಿಕೆಟ್ ಹಿಡಿದು ಕೂತಿರೋ ಈ ಮಕ್ಕಳ ಮುಖದ ಸಂತೋಷಕ್ಕೆ ಬೆಲೆ ಕಟ್ಟೋರು ಯಾರೂ ಇಲ್ಲ. ಅಸಲಿಗೆ ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಸರ್ಕಾರಿ ಶಾಲೆ. ಮುತ್ತಿಗೆಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 420 ಜನ ಮಕ್ಕಳಿದ್ದಾರೆ. ಈ ಶಾಲೆಯಲ್ಲಿ 5-6-7ನೇ ತರಗತಿಯ ಮಕ್ಕಳನ್ನು ವಾರ್ಷಿಕ ಶೈಕ್ಷಣಿಕ ಪ್ರವಾಸಕ್ಕೆಂದು  ಫ್ಲೈಟ್ ನಲ್ಲಿ ಕರೆದೊಯ್ದು ಹೊಸದೊಂದು ದಾಖಲೆ ಬರೆದಿದ್ದಾರೆ. ಸರ್ಕಾರಿ ಶಾಲೆಗಳಂದ್ರೆ ಮೂಗು ಮುರಿಯೋ ಪೋಷಕರಿಗೆ ಇಲ್ಲಿನ ಶಿಕ್ಷಕರು ಒಳ್ಳೆಯ ಪಾಠ ಮಾಡಿದ್ದಾರೆ. ಪೋಷಕರ ಒಪ್ಪಿಗೆ ಮೇರೆಗೆ ಶಿಕ್ಷಕರು  ಮಕ್ಕಳನ್ನು ಫ್ಲೈಟ್‍ನಲ್ಲಿ ಪ್ರವಾಸಕ್ಕೆ ಕರೆದೊಯ್ದು ಸರ್ಕಾರಿ ಶಾಲೆ ಯಾರಿಗೂ-ಯಾವುದಕ್ಕೂ ಕಡಿಮೆ ಇಲ್ಲ ಅನ್ನೋದನ್ನು ನಿರೂಪಿಸಿದ್ದಾರೆ. ಈ ಫ್ಲೈಟ್ ಪ್ರವಾಸದಿಂದ ಮಕ್ಕಳು-ಪೋಷಕರು ಕೂಡ ಫುಲ್ ಖುಷ್ ಆಗಿದ್ದಾರೆ. ಮನೆಯವರು ಕೂಡ ಖುಷಿಯಿಂದ ಮಕ್ಕಳನ್ನು ಫ್ಲೈಟ್ ನಲ್ಲಿ ಪ್ರವಾಸಕ್ಕೆ ಕಳಿಸಿ ಖುಷಿ ಪಟ್ಟಿದ್ದಾರೆ.

ಮಕ್ಕಳ ಈ ಫ್ಲೈಟ್ ಪ್ರವಾಸಕ್ಕೆ ಶಾಲೆಯ ದೈಹಿಕ ಶಿಕ್ಷಕ ಸುರೇಶ್ ಎಂಬವರು ತಮ್ಮ ಕೈಯಿಂದ 60 ಸಾವಿರ ಹಣ ಹಾಕಿ ಮಕ್ಕಳನ್ನು ಕರೆದೊಯ್ದಿದ್ದಾರೆ. ಶಾಲೆಯ ಓರ್ವ ವಿದ್ಯಾರ್ಥಿಗೆ ಪೋಷಕರೇ ಇಲ್ಲ. ಆತನಿಗೆ ಪ್ರವಾಸಕ್ಕೆ ಹೋಗೋದಕ್ಕೆ ಆಸೆ ಇತ್ತು. 4-5 ಶಿಕ್ಷಕರು ದಾನಿಗಳಾಗಿ ಹಣ ಹಾಕಿ ಆ ವಿದ್ಯಾರ್ಥಿಯನ್ನು ಫ್ಲೈಟ್ ನಲ್ಲಿ ಪ್ರವಾಸಕ್ಕೆ ಕಳಿಸಿದ್ದಾರೆ. ಒಂದು ಟಿಕೆಟ್ ಹತ್ರತ್ರ 4,000 ರೂ. ಹಣ ಇದೆ. 32 ಮಕ್ಕಳಿಗೆ ಒಂದೂಕಾಲು ಲಕ್ಷಕ್ಕಿಂತ ಹೆಚ್ಚು ಹಣವಾಗಲಿದೆ. ಮಕ್ಕಳ ಖುಷಿಗಿಂತ ದೊಡ್ಡದು  ಯಾವುದೂ ಇಲ್ಲ ಎಂದು ಶಿಕ್ಷಕರು ಕೂಡ ಹಣ ಹಾಕಿ ಮಕ್ಕಳನ್ನು ಪ್ರವಾಸಕ್ಕೆ ಕಳಿಸಿದ್ದಾರೆ. ಆದರೆ, ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುತ್ತಿದ್ದ ಜನತೆಗೆ ಇಂದು ಸರ್ಕಾರಿ ಶಾಲೆ ಶಿಕ್ಷಕರೇ ಆದರ್ಶಮಯ ಪಾಠ ಮಾಡಿದ್ದಾರೆ. 4 ಗೋಡೆಗಳ ಮಧ್ಯ ಕಲಿಸುವ ಪಾಠವೇ ಬೇರೆ. ಸಮಾಜ ಕಲಿಸುವ ಪಾಠವೇ ಬೇರೆ ಎಂಬುದನ್ನು ಇಂದು ಸರ್ಕಾರಿ ಶಾಲೆ ಶಿಕ್ಷಕರು ಮಕ್ಕಳ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿರುವುದು ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ.

Post a Comment

0 Comments