Ticker

6/recent/ticker-posts

Ad Code

ಕುಬಣೂರು ಶಾಲಾ ವಾರ್ಷಿಕೋತ್ಸವದ ಸಂದರ್ಭ ಒಡ್ಡಂಬೆಟ್ಟು ಬಟ್ಯಪ್ಪ ಸುಲಾಯ ದತ್ತಿ ನಿಧಿ ಪುರಸ್ಕಾರ ವಿತರಣೆ

 

ಬಂದ್ಯೋಡು : ಕುಬಣೂರು ಶ್ರೀ ರಾಮ ಎಯುಪಿ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಒಡ್ಡಂಬೆಟ್ಟು ದಿವಂಗತ ಬಟ್ಯಪ್ಪ ಸುಲಾಯರ ಸ್ಮರಣಾರ್ಥ ಅವರ ಪುತ್ರರಾದ  ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಕೊಡಮಾಡುವ ನಗದು ಪುರಸ್ಕಾರವನ್ನು ಶಾಲೆಯ ಇಬ್ಬರು ಉತ್ತಮ ವಿದ್ಯಾರ್ಥಿಗಳಿಗೆ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ  ಜೋನ್ ಕ್ರಾಸ್ತಾ ಮತ್ತು ಸೀನಿಯರ್ ಸುಪರಿಂಟೆಂಡೆಂಟ್ ಜಿತೇಂದ್ರ ಅವರು  ವಿತರಿಸಿದರು.

 ಈ ಸಂದರ್ಭದಲ್ಲಿ ಪೈವಳಿಕೆ ನಗರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ  ವಿಶ್ವನಾಥ, ಶಾಲಾ ಸಂಚಾಲಕರಾದ  ಮೋಕ್ಷದಾ ಶೆಟ್ಟಿ, ಶಾಲಾ ಆಡಳಿತ ಸಲಹೆಗಾರರಾದ  ಬಾಲಕೃಷ್ಣ ಶೆಟ್ಟಿ , ವಸಂತ ಮಯ್ಯ ಮತ್ತು  ಹರೀಶ್ ಸುಲಾಯ ಅವರ ಪತ್ನಿ ಡಾ.ಅಪರ್ಣ ಆಳ್ವ ಉಪಸ್ಥಿತರಿದ್ದರು.

Post a Comment

0 Comments