ಪೆರ್ಲ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ಸಿಪಿಐಎಂ ನೇತಾರ ಸುಧಾಕರ್ ಕೂಡಲೇ ತನ್ನ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಎಣ್ಮಕಜೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಯಿತು. ಕಾಸರಗೋಡು ಬಿಜೆಪಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮುರಳೀಧರ ಯಾದವ್ ಅವರು ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿ ಮಹಿಳಾ ಕಿರುಕುಳ ಕೇಸಲ್ಲಿ ಸಿಲುಕಿರುವ ಸುಧಾಕರ ತನ್ನ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು ಇಲ್ಲವಾದಲ್ಲಿ ಮುಂದಕ್ಕೆ ಪಂಚಾಯತಿನಲ್ಲಿ ನಡೆಯುವ ಬೋರ್ಡ್ ಮೀಟಿಂಗ್ ಗೆ ಪ್ರವೇಶಿಸಲು ಬಿಜೆಪಿ ಪಕ್ಷ ಬಿಡುವುದಿಲ್ಲ ಯಾವುದೇ ರೀತಿಯ ಪ್ರತಿರೋಧಕ್ಕೂ ತಯಾರಿದ್ದೇವೆ ಎಂಬ ಸ್ಪಷ್ಟ ನಿಲುವನ್ನು ಹೇಳಿದರು. ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಪಂಚಾಯತ್ ಸಮಿತಿಯ ಅಧ್ಯಕ್ಷರಾದ ರಮಾನಂದ ಭಟ್ ಎಡಮಲೆ,ಪ್ರಧಾನ ಕಾರ್ಯದರ್ಶಿಗಳಾದ ರಾಧಾಕೃಷ್ಣ ಭಟ್ ಪತ್ತಡ್ಕ,ನೇತಾರರಾದ ಉದಯ ಚೆಟ್ಟಿಯಾರ್,ಸುಮಿತ್ ರಾಜ್ ಶ್ರೀಮತಿ ಉಷಾಕುಮಾರಿ,ಶ್ರೀಮತಿ ಲಲಿತಾ ಕೇಶವ ನಾಯ್ಕ,ಶ್ರೀಮತಿ ಮಮತಾ ರೈ ,ಪಂಚಾಯತ್ ಸದಸ್ಯರುಗಳಾದ ಜಗದೀಶ್ ಕುಲಾಲ್ ನಲ್ಕ,ಕೃಷ್ಣಪ್ಪ ಬಜಕೂಡ್ಲು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

0 Comments