Ticker

6/recent/ticker-posts

Ad Code

ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಲು ಹಾಗೂ ಪರಿವಾರ ದೈವಸ್ಥಾನದ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮೋತ್ಸವ


 ಮುಂಡಿತ್ತಡ್ಕ : ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಲು  ಹಾಗೂ ಪರಿವಾರ ದೈವಸ್ಥಾನದ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮೋತ್ಸವ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಬುಧವಾರ ಆರಂಭಗೊಂಡಿದೆ. ಇದರಂಗವಾಗಿ ನಿನ್ನೆ 
ಬೆಳಿಗ್ಗೆ ಗಣಪತಿ ಹವನ,ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ,ಉಗ್ರಾಣ ಮುಹೂರ್ತ, ಅನ್ನಪೂರ್ಣ ಭೋಜನಾ ಶಾಲೆಯ ಲೋಕಾರ್ಪಣೆ ಜರಗಿತು.ಮಧ್ಯಾಹ್ನ ಶ್ರೀ ದೈವಗಳಿಗೆ ಮಹಾ ತಂಬಿಲ,ವಿವಿಧ ತಂಡಗಳ ಭಜನೆ ಜರಗಿತು. ರಾತ್ರಿ ದುರ್ಗಾಪೂಜೆ,ತಂಬಿಲ, ಶ್ರೀ ಪೂಮಾಣಿ ಕಿನ್ನಿಮಾಣಿ, ಬೀರ್ಣಾಳ್ವ, ಬಬ್ಬರ್ಯ ದೈವಗಳ ಭಂಡಾರ ಇಳಿಯುವುದು. ಬಳಿಕ ರಾಜೇಶ್ ರೈ ಏಳ್ಕಾನ ಮತ್ತು ಬಳಗದ ರಾಗತರಂಗ್ ಭಜನ್ಸ್ ಇವರ ಭಕ್ತಿಗಾನ ಸುಧಾ ಜರಗಿತು. ಗುರುವಾರ ಬೆಳಗ್ಗೆ ಶ್ರೀಬಬ್ಬರ್ಯ  ದೈವದ ದರ್ಶನ, ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ನೇಮ, ಪ್ರಸಾದ ವಿತರಣೆ ಜರಗಿತು. ರಾತ್ರಿ 9 ಗಂಟೆಗೆ ನಡೆಯುವ  ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಜರಗಲಿದೆ.ರಾತ್ರಿ 9.30ಯಿಂದ ಮೆಗಾ ತಿರುವಾದಿರ ಮತ್ತು ಕೈ ಕೊಟ್ಟುಕ್ಕಳಿ ಪ್ರದರ್ಶನಗೊಳ್ಳಲಿದೆ. 

ನಾಳೆ (ಶುಕ್ರವಾರ)ಬೆಳಗ್ಗೆ 10 ಗಂಟೆಗೆ ಶ್ರೀ ಧೂಮಾವತಿ ದೈವದ ನೇಮೆ, ಪ್ರಸಾದ ವಿತರಣೆ,ಮಧ್ಯಾಹ್ನ ಗಂಟೆಗೆ ಪ್ರಸಾದ ಭೋಜನ,2.00 ರಿಂದ 3ರ ವರೆಗೆ ಶ್ರೀಕೃಷ್ಣ ಬಾಲಗೋಕುಲದ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ಸಾಯಂಕಾಲ 3.30ರಿಂದ : ಶ್ರೀ ಗುಳಿಗೆ ಮತ್ತು ಕೊರತಿ ದೈವಗಳ ನೇಮ, ಪ್ರಸಾದ ವಿತರಣೆ,ರಾತ್ರಿ 9ರಿಂದ ವಿಶೇಷ ಸಿಡಿಮದ್ದು ಪ್ರದರ್ಶನ,ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಗಂಟೆ 10 ರಿಂದ ಶ್ರೀ ಈರ್ವರು ಉಳ್ಳಾಕ್ಲು ಗೆಳೆಯರ ಬಳಗದ ಪ್ರಾಯೋಜಕತ್ವದಲ್ಲಿ ಡಾ| ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ) ಮತ್ತು ಶ್ರೀಕೃಷ್ಣ ಬಾಲಗೋಕುಲ ಅರಿಯಪ್ಪಾಡಿ ಮಾಡ ಇವರು ಸಾದರ ಪಡಿಸುವ ನೃತ್ಯ ತರಂಗ ಮತ್ತು ಮಂಗಳೂರು ವಿಭಾಗದ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ರಿಯಾಲಿಟಿ ಶೋ ಖ್ಯಾತಿಯ ಗುರುಮರದ ಸಾಕ್ಷಿ, ಸಾನ್ವಿ ಮತ್ತು ಮತ್ತೂರು ವಿಭಾಗದ ಸಂಗಮ್ ಬ್ರದರ್ ಇವರಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಳ್ಳಲಿದೆ.

ಚಿತ್ರ ; ಶೇಖರ ಆಚಾರ್ಯ ವಾಂತಿಚ್ಚಾಲು

Post a Comment

0 Comments