ಉಪ್ಪಳ : ಬಾಯಾರು ಸಮೀಪದ ಬೆರಿಪದವು ಶ್ರೀ ಮೂಕಾಂಬಿಕಾ ಭಜನ ಮಂದಿರದ 19ನೇ ವರ್ಷದ ಕಾರ್ಯಕ್ರಮಗಳ ಅಂಗವಾಗಿ ನೂತನ ಮೇಲ್ಟಾವಣಿಯ ಲೋಕಾರ್ಪಣೆ ನಡೆಯಿತು. ಶ್ರೀದೇವಿ ಸೇವಾ ಸಮಿತಿ ಬೆರಿಪದವು ಇದರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಪರಕ್ಕಜೆ ಗಣಪತಿ ಭಟ್ಟರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಪರಕ್ಕಜೆ ಅನಂತನಾರಾಯಣ ಭಟ್ಟರ ನೇತೃತ್ವದಲ್ಲಿ ನಡೆದ ಚಂಡಿಕಾಯಾಗದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಮೇಲ್ಚಾವಣಿಯ ಲೋಕಾರ್ಪಣೆಯನ್ನು ಹೇರಂಭ ಇಂಡಸ್ಟ್ರೀಸ್ ಮುಂಬಯಿ ಇದರ ಉದ್ಯಮಿ, ಕೊಡುಗೈದಾನಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರ ಪರವಾಗಿ ಸಹೋದರ ಚಂದ್ರಹಾಸ ಶೆಟ್ಟಿ ನಿರ್ವಹಿಸಿದರು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಆಶೀರ್ವಚನಗೈದರು.
ಸದಾನಂದ ಆಳ್ವ ಪೆರ್ವೋಡಿಬೀಡು ಅಧ್ಯಕ್ಷತೆವಹಿಸಿದ್ದರು. ಉದ್ಯಮಿ ದಾನಿ ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ,ಯುವ ಉದ್ಯಮಿ ಮೋಹನ್ ರೈ ಮಜ್ಜಾರ್, ಜಯರಾಜ್ ಶೆಟ್ಟಿ ಚಾರ್ಲ, ರಮೇಶ್ ವರಪ್ಪಾದೆ,ನಾರಾಯಣ ನ್ಯಾಕ್ ನಡುಹಿತ್ಲು ಮೊದಲಾದವರು ಮಾತನಾಡಿದರು. ಶ್ರೀದೇವಿ ಸೇವಾ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಪಟ್ಲ ಸ್ವಾಗತಿಸಿದರು.ಬಳಿಕ ವಿವಿಧ ಬಾಲಗೋಕುಲದ ಮಕ್ಕಳಿಂದ ನೃತ್ಯ ವೈಭವ ಪ್ರದರ್ಶನಗೊಂಡಿತು. ರಾತ್ರಿ ಲಲಿತಾ ಯಕ್ಷಗಾನ ತಂಡ ಏಳ್ಳಾನ ಇದರ ಬಾಲ ಕಲಾವಿದರಿಂದ 'ಸುದರ್ಶನ ವಿಜಯ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.



0 Comments