ಕಾಸರಗೋಡು : ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನೂತನ ಪರಿಕಲ್ಪನೆ 'ಗಣ್ಯರೆಡೆಗೆ ಬೊಂಬೆ ನಡಿಗೆ' ಅಭಿಯಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿ ಶುಭ ಹಾರೈಸಿದರು. ಹೇಮಾವತಿ ಹೆಗ್ಗಡೆ ಉಪಸ್ಥಿತರಿದ್ದರು. ಜಗದೀಶ ಕೂಡ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಕೆ ಉಳಿಯತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವರಾಮ ಕಾಸರಗೋಡು, ಅಚಲ್ ರಾವ್ ಮರ್ದಂಬೈಲ್, ಶ್ರೀಕಾಂತ ಕಾಸರಗೋಡು ಭಾಗವಹಿಸಿದ್ದರು. ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ ವಿ ರಮೇಶ್ ನೇತ್ರತ್ವದಲ್ಲಿ ಬೊಂಬೆಯಾಟ ಪ್ರದರ್ಶನ ಜರಗಿತು. ತಿರುಮಲೇಶ ಕೆ.ವಿ, ಸುದರ್ಶನ ಕೆ.ವಿ , ಅನೀಶ್ ಪಿ., ಮನೋರಮ ಎಡನೀರು, ಭವ್ಯಶ್ರೀ ಬಲ್ಲಾಳ್ ಸೂತ್ರಧಾರಿಗಳಾಗಿ ಭಾಗವಹಿಸಿದ್ದರು. ನರಕಾಸುರ ವಧೆ ಯಶಸ್ವೀ ಪ್ರದರ್ಶನವನ್ನು ಸಹಸ್ರ ಸಂಖೆಯ ಪ್ರೇಕ್ಷಕರು ಕರತಾಡನದೊಂದಿಗೆ ವೀಕ್ಷಿಸಿದರು.

0 Comments