Ticker

6/recent/ticker-posts

Ad Code

ಕುಂಬ್ಡಾಜೆ ಪಂಚಾಯಿತಿಯಲ್ಲಿ ವಿಷನ್-2026ಕ್ಕೆ ಚಾಲನೆ

 

ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತ್ ಮತ್ತು ಕುಟುಂಬ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಆರು ಗುರಿಗಳನ್ನು ಸಾಧಿಸುವ ವಿಷನ್ 2026ಕ್ಕೆ ಚಾಲನೆ ನೀಡಲಾಯಿತು. ಕುಂಬ್ಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಏಳು ಶಾಲಾ ಆವರಣಗಳನ್ನು ತಂಬಾಕು ಮುಕ್ತಗೊಳಿಸಲಾಗುವುದು. ಪಾಲಿಯೇಟಿವ್ ಕೇರ್ ಪಡೆಯುವ ರೋಗಿಗಳು ಮತ್ತು ನಿರ್ಗತಿಕ ರೋಗಿಗಳಿಗೆ ಸಾಂತ್ವನ ನೀಡಲು ಜನರ ಸಹಾಯದಿಂದ ಸಮಿತಿಯನ್ನು ರಚಿಸಲಾಗುವುದು. ಮಲೇರಿಯಾ ತಡೆಗಟ್ಟುವ ಚಟುವಟಿಕೆಗಳಿಗಾಗಿ ಮತ್ತು 14 ವಾರ್ಡ್‌ಗಳಲ್ಲಿ ಆರೋಗ್ಯ ಸ್ವಯಂಸೇವಕರನ್ನು ಆಯ್ಕೆ ಮಾಡಲಾಗುವುದು. ಕುಂಬ್ಡಾಜೆ ಗ್ರಾಮ ಪಂಚಾಯಿತಿಯನ್ನು  ಕ್ಷಯ ಮುಕ್ತ ಪಂಚಾಯತ್ ಮಾಡಲಾಗುವುದು. ಈ ಕುರಿತು ಕುಂಬ್ಡಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಭೆ ಸೇರಿದ ಜನಪ್ರತಿನಿಧಿಗಳು ಮತ್ತು ಕುಟುಂಬ ಆರೋಗ್ಯ ಕೇಂದ್ರದ ಸಿಬ್ಬಂದಿ ಕುಟುಂಬ ಆರೋಗ್ಯ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಕಾರ್ಯಕ್ರಮ ಉದ್ಘಾಟಿಸಿದರು. ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ., ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನಾ ಕನಕಜೆ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಅಬೂಬಕ್ಕರ್, ಸದಸ್ಯರಾದ ಮಹೇಶ ಎ, ನೂರುದ್ದೀನ್ ಪಿ, ಸೌಭಾಗ್ಯ ಲಕ್ಷ್ಮೀ ಕೆ, ಗೀತಾ ಡಿ, ಎಸ್ ಮುಹಮ್ಮದ್ ಕುಂಞಿ, ಕೊರಗಪ್ಪ ಜಿ, ಬಬಿತಾ ರೇಷ್ಮಾ, ಬಿ.ಟಿ ಅಬ್ದುಲ್ಲ ಕುಂಞಿ ಮಾತನಾಡಿದರು. ಕುಟುಂಬ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿದ್ದರು. ವಿಷನ್-೨೦೨೬ ಯೋಜನೆಯ ಗುರಿ ಮತ್ತು ಮಹತ್ವವನ್ನು ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೈಯದ್ ಹಮೀದ್ ಶುಹೈಬ್ ಮತ್ತು ಆರೋಗ್ಯ ನಿರೀಕ್ಷಕ ಕೆ.ಸುರೇಶ್ ಕುಮಾರ್ ವಿವರಿಸಿದರು. ಆಶಾ ಕಾರ್ಯಕರ್ತೆ ಲಕ್ಷ್ಮಿ ಎನ್ ವಂದಿಸಿದರು.

Post a Comment

0 Comments