Ticker

6/recent/ticker-posts

Ad Code

ಫೆ. 14ಕ್ಕೆ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಐಎಎಸ್ ತರಬೇತಿ ಶಿಬಿರ

ಪೆರ್ಲ ,:  ನಾಲಂದ ಮಹಾವಿದ್ಯಾಲಯವು ಆಯೋಜಿಸಿದ ಐಏಸ್ ತರಬೇತಿ ಶಿಬಿರ ಫೆ.14 ರಂದು  ನಾಲಂದ ಕಾಲೇಜ್ ಓಫ್ ಆರ್ಟ್ಸ್ & ಸಯನ್ಸ್ ಕಾಲೇಜಿನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ  10ಗಂಟೆಯಿಂದ ಶಿಬಿರ ಆರಂಭವಾಗಲಿದ್ದು ಸಂಕಲ್ಪ್ ಐಎಎಸ್ ಅಕಾಡೆಮಿಯ ಕೋರ್ಸ್ ಕೋರ್ಡಿನೇಟರ್ ಹರಿಗೋವಿಂದ್, ವರ್ಕಿಂಗ್ ಚೇರ್‌ಮೇನ್  ಕೆ.ವಿ. ಜಯರಾಜನ್ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾಗಿ‌ ತರಬೇತಿ ನಡೆಸಲಿದ್ದಾರೆ.

ಈ ತರಬೇತಿಯಲ್ಲಿ ಭಾಗವಹಿಸಿದವರಿಗೆ ಜ್ಞಾನ, ಶಿಸ್ತು ಮತ್ತು ಸಂಕಲ್ಪದಿಂದೊಡಗೂಡಿದ ನಾಗರಿಕ ಸೇವಾ ಪದವಿಯನ್ನು ಪಡೆಯಲು ಅನುಕೂಲವಾಗಲಿದೆ. ಸ್ವಾಭಿಮಾನದಿಂದೊಡಗೂಡಿದ ಅತ್ಯುತ್ತಮ ದೇಶಸೇವೆ ಮಾಡುವ ಮಹತ್ಕಾರ್ಯಕ್ಕೆ ಮೊದಲ ಹೆಜ್ಜೆಯಾಗಿ ಈ ತರಬೇತಿ ಶಿಬಿರ ಆಯೋಜಿಸಲಾಗಿದೆ. ಕಾಸರಗೋಡಿನ ಐಎಎಸ್ ಆಕಾಂಕ್ಷಿಗಳಾದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Post a Comment

0 Comments