Ticker

6/recent/ticker-posts

Ad Code

ಅಡಿಕೆ ಮಾರಾಟದ ಹಣ ಕಳವು : 24 ಗಂಟೆಯೊಳಗೆ ಆರೋಪಿಯ ಬಂಧನ

 

ಮಂಗಳೂರು : ​ಅಡಿಕೆ ಮಾರಾಟ ಮಾಡಿ ವಾಹನದ ಡ್ಯಾಶ್‌ಬೋರ್ಡ್‌ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ್ದ ಪ್ರಕರಣವನ್ನು ಮಂಗಳೂರು ಉತ್ತರ (ಬಂದರ್) ಠಾಣಾ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಈ ಸಂಬಂಧ ಕಸಬಾ ಬೆಂಗ್ರೆಯ ನಿವಾಸಿ, ಪ್ರಸ್ತುತ ಜಪ್ಪು ನಿವಾಸಿ ಝಾಕೀರ್ ಹುಸೈನ್ ಯಾನೆ  ಜಾಕಿ (38) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ಕಳವು ಮಾಡಿದ್ದ ಹಣದ ಪೈಕಿ 70,000 ರೂ. ನಗದು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ ಕಳವು ಮಾಡಿದ ಹಣದಿಂದಲೇ ಖರೀದಿಸಿದ್ದ ಹೊಸ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ.

 ಫೆಬ್ರವರಿ 7ರಂದು ಮಹಮ್ಮದ್ ನಿಜಾಮುದ್ದಿನ್ ಎಂಬವರು ಶ್ರೀಧರ ಆಳ್ವರವರಿಗೆ ಸೇರಿದ ಅಡಿಕೆಯನ್ನು ಮಾರಾಟ ಮಾಡಿ ಬಂದಿದ್ದ 1,28,740 ರೂ. ಹಣವನ್ನು ಟಾಟಾ ಇಂಟ್ರಾ ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಇರಿಸಿದ್ದರು. ಬಂದರ್‌ನ ಜೆ.ಎಂ. ರೋಡ್‌ನಲ್ಲಿ ಎಸಿಪಿ ಶೀಟ್ ಖರೀದಿಗಾಗಿ ವಾಹನ ನಿಲ್ಲಿಸಿ ಮರಳಿದಾಗ ಹಣ ಕಳುವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮರುದಿನವೇ ಮಣ್ಣಗುಡ್ಡ ಜಂಕ್ಷನ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Post a Comment

0 Comments