ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಮರುದ್ದೀನ್ ಪಾಡಲಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಅಪ್ಪಣ್ಣ ಮಾಸ್ತರ್ ಮಾತನಾಡುತ್ತಾ ಶಾಲೆಯ ಉತ್ತಮ ವಿದ್ಯಾರ್ಥಿಗಳಲ್ಲೋರ್ವಳಾಗಿದ್ದ ಮೂಕಾಂಬಿಕಾ ಅವರು ಇಂದು ಇದೇ ಶಾಲೆಯಲ್ಲಿ ಉತ್ತಮ ಅಧ್ಯಾಪಿಕೆಯಾಗಿ ನಿವೃತ್ತಿಯಾಗುತ್ತಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಗ್ರಾಮಪಂಚಾಯಿತಿ ಸದಸ್ಯರುಗಳಾದ ಅನ್ನತ್ ಬೀವಿ, ಶ್ಯಾಮಪ್ರಸಾದ ಸರಳಿ, ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ ಕೆ, ಮಾತೃಸಂಘದ ಅಧ್ಯಕ್ಷೆ ಆಶಾಮೋಳ್, ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋನ್ ಡಿ.ಸೋಜಾ, ಎಸ್.ಆರ್.ಜಿ.ಕನ್ವೀನರ್ ದಿನ ಕೆ. ಶುಭಾಶಂಸನೆಗೈದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ತಾಹಿರಾ ಮಾಡತ್ತಡ್ಕ, ಮಾತೃಸಂಘದ ಉಪಾಧ್ಯಕ್ಷೆ ಶೀಬಾ ಉಪಸ್ಥಿತರಿದ್ದರು. ಸೇವೆಯಿಂದ ನಿವೃತ್ತರಾಗುತ್ತಿರುವ ಹಿಂದಿ ಶಿಕ್ಷಕಿ ಮೂಕಾಂಬಿಕಾ ಕೆ. ಅವರನ್ನು ಸನ್ಮಾನಿಸಲಾಯಿತು. ಹಳೆವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಅವರ ಹಿತೈಷಿಗಳು ಉಡುಗೊರೆಯನ್ನು ನೀಡಿ ಅಭಿನಂದಿಸಿದರು. ಅಧ್ಯಾಪಿಕೆ ಅಖಿಲಾ ಲಕ್ಷ್ಮಿ ಸನ್ಮಾನ ಪತ್ರ ವಾಚಿಸಿದರು. ಅಧ್ಯಾಪಕ ಸುಭಾಷ್ ಇ.ಕೆ. ವರದಿ ವಾಚನ ನಡೆಸಿದರು. ಅಧ್ಯಾಪಿಕೆ ಶಶಿಕಲಾ ಪ್ರಾರ್ಥನೆ ಹಾಡಿದರು. ಮುಖ್ಯೋಪಾಧ್ಯಾಯ ಎ.ರಾಧಾಕೃಷ್ಣನ್ ಸ್ವಾಗತಿಸಿ, ಸ್ಟಾಫ್ ಕಾರ್ಯದರ್ಶಿ ಪ್ರಶಾಂತ ಕುಮಾರ್ ಬಿ.ವಂದಿಸಿದರು. ಅಧ್ಯಾಪಕರುಗಳಾದ ಅಬ್ದುಲ್ ಸಲಾಂ ಪಿ, ಶರತ್ ಕುಮಾರ್ ಎಂ. ನಿರೂಪಣೆಗೈದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಕಲಾಪ್ರದರ್ಶನಗಳು ನಡೆಯಿತು.

0 Comments