ಏತಡ್ಕ : ಗದ್ದೆಮನೆ ನಾಗರಕ್ತೇಶ್ವರೀ ದೈವಸ್ಥಾನದಲ್ಲಿ ಮಾರ್ಚ್ 7ರಂದು ನಡೆಯುವ "ನಾಗರಕ್ತೇಶ್ವರೀ ದೈವ ಕೋಲ''ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ನಾಗರಕೇಶ್ವರೀ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಆಡಳಿತ ಮೊಕ್ತೇಸರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾರ್ಚ್ 7ರಂದು ಸಾಯಂ. ಗಂಟೆ 6 ರಿಂದ ಶ್ರೀ ದುರ್ಗಾಪರಮೇಶ್ವರೀ ಭಜನಾ ಸಂಘ ಏತಡ್ಕ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7ರಿಂದ ಶ್ರೀ ದುರ್ಗಾ ಕುಣಿತ ಭಜನಾ ಸಂಘ, ಏತಡ್ಕ ಇವರಿಂದ ಕುಣಿತ ಭಜನೆ , ರಾತ್ರಿ ಗಂಟೆ 8ರಿಂದ 8.30 ಭಂಡಾರ ತೆಗೆಯುವ ಕಾರ್ಯಕ್ರಮ, ಗಂಟೆ 8.30ರಿಂದ ಪ್ರಸಾದ ಭೋಜನ, ಗಂಟೆ 9.00ರಿದ ಗಡಿನಾಡ ಸಾಂಸ್ಕೃತಿಕ ಕಲಾವೇದಿಕೆ (ರಿ.) ಕಾಸರಗೋಡು ಇವರಿಂದ ಸಾಂಸ್ಕೃತಿಕ ಕಲಾವೈಭವ ರಾತ್ರಿ 11ರಿಂದ ನೃತ್ಯವೈವಿಧ್ಯ ಕಾರ್ಯಕ್ರಮ, ರಾತ್ರಿ ಗಂಟೆ 2.30ರಿಂದ ಶ್ರೀ ನಾಗರಕೇಶ್ವರಿ ದೈವದ ಕೋಲ, ಅರಶಿನ ಪ್ರಸಾದ ವಿತರಣೆಯೊಂದಿಗೆ ಸಮಾಪ್ತಿಗೊಳ್ಳಲಿದೆ.

0 Comments