Ticker

6/recent/ticker-posts

Ad Code

ಅಳಿಯದೆ ಉಳಿದು ಗಮನ ಸೆಳೆಯುತ್ತಿರುವ ಪುರಾತನ ಶಿಲಾಚಿತ್ರಗಳು

 

ಕಾಸರಗೋಡು : ಮಹಾ ಶಿಲಾಯುಗದವು ಎಂದು ನಂಬಲಾದ ಶಿಲಾಚಿತ್ರಗಳು ಗಮನಾರ್ಹವಾಗಿವೆ. ಮಾನವರು ಮತ್ತು ಪ್ರಾಣಿಗಳ ಹೆಜ್ಜೆಗುರುತುಗಳನ್ನು ಬಂಡೆಯ ಮೇಲೆ ಹರಿತವಾದ ಆಯುಧದಿಂದ ಕೆತ್ತಲಾಗಿದೆ. ಇಂತಹ  ಶಿಲಾಚಿತ್ರಗಳು ಬೇಡಡ್ಕ ಗ್ರಾಮದ ಮೊಳೋತ್ತುಂಕಾವು ಸಮೀಪದ ಭಗವತಿ ದೇವಾಲಯದ ಬಳಿಯ  ಆಮೆಕೊಳದಲ್ಲಿವೆ. ಎರಡು ಸಾವಿರ ವರ್ಷಗಳ ಹಿಂದಿನ ಸಂಸ್ಕೃತಿಗೆ ಐತಿಹಾಸಿಕ ಸಾಕ್ಷಿಯಾಗಿ ಈ ಹೆಜ್ಜೆಗುರುತುಗಳು ಇಂದಿಗೂ ಹಾಗೆಯೇ ಉಳಿದಿವೆ. ಇದು  ಪಳ್ಳಂ ಎಂಬ ಜಲಾಶಯದಲ್ಲಿವೆ. ಮಳೆಗಾಲದಲ್ಲಿ ಸಂಪೂರ್ಣವಾಗಿ ನೀರಿನ ಅಡಿಯಲ್ಲಿರುವ ಶಿಲಾಚಿತ್ರಗಳು, ಕೊಳದಲ್ಲಿನ ನೀರು ಕಡಿಮೆಯಾದಾಗ ಮಾತ್ರ ಗೋಚರಿಸುತ್ತವೆ. ಇಲ್ಲಿನ ಆಮೆ ಕೊಳದ ಮಧ್ಯದಲ್ಲಿ ಕೂರ್ಮಾವತಾರದ ರೂಪದಲ್ಲಿ ವಿಷ್ಣುವಿನ ವಿಗ್ರಹವೂ ಇದೆ. ಈ ಆಮೆ ಕೊಳಕ್ಕೆ ಪ್ರತಿದಿನ ಅನೇಕ ಭಕ್ತರು ಆಮೆಗಳಿಗೆ ನೈವೇದ್ಯ ಅರ್ಪಿಸುವುದಕ್ಕಾಗಿ ಬರುತ್ತಿದ್ದು ಇತಿಹಾಸ ಪ್ರಸಿದ್ಧವಾಗಿದೆ.

Post a Comment

0 Comments