Ticker

6/recent/ticker-posts

Ad Code

ಮಹಿಳೆ ಮಾಂಗಲ್ಯ ಸರ ಕಸಿದು ಕಳ್ಳರು ಪರಾರಿ : ಮಾರಕ ಸ್ಪ್ರೇ ಸಿಂಪಡಣೆ ಪರಿಣಾಮ ಮಹಿಳೆ ಸಾವು

 

ಬೆಂಗಳೂರು: ಸ್ಪ್ರೇ ಸಿಂಪಡಿಸಿ ಕಳ್ಳರು ಮಹಿಳೆಯ ಮಾಂಗಲ್ಯ ಸರ  ಕಸಿದು ಪರಾರಿಯಾಗಿದ್ದು, ಮಾರಕ ಸ್ಪ್ರೇ ಸಿಂಪಡಣೆಯ ಮಹಿಳೆ ಸಾವನ್ನಪ್ಪಿದ ಘಟನೆ ನೆಲಮಂಗಲ ಬಳಿಯ ಹುಸ್ಕೂರು ಗ್ರಾಮದಲ್ಲಿ ನಡೆದಿದೆ. ಜ್ಯೋತಿ (45) ಮೃತ ಮಹಿಳೆ. ಜ್ಯೋತಿ ಬೆಳಗ್ಗೆ ಎದ್ದು ಮನೆಯ ಮುಂದೆ ಕಸ ಗುಡಿಸುವ ವೇಳೆ ಬೈಕ್‌ನಲ್ಲಿ ಬಂದ ಕಳ್ಳರು ಮಹಿಳೆಗೆ ಸ್ಪ್ರೇ ಸಿಂಪಡಿಸಿ ಆಕೆಯ ಕೊರಳಲ್ಲಿದ್ದ 70 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಸ್ಪ್ರೇ ಸಿಂಪಡಿಸಿದ ಪರಿಣಾಮ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೂಡಲೇ ಮಹಿಳೆಯನ್ನು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

Post a Comment

0 Comments