ಮಂಜೇಶ್ವರ : ಮಂಜೇಶ್ವರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ (ಭೂ ಅಭಿವೃದ್ಧಿ) ಬ್ಯಾಂಕ್ ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸಹಿತ 13 ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು. ಕಾಸರಗೋಡು ಜಿ. ಪಂ. ಸದಸ್ಯ ಸೋಮಶೇಖರ ಜೆ. ಎಸ್. ಅಧ್ಯಕ್ಷರಾಗಿಯೂ, ಕುಂಬಳೆ ಗ್ರಾ. ಪಂ. ಸದಸ್ಯ ಮಡ್ವ ಮಂಜುನಾಥ ಆಳ್ವ ಉಪಾಧ್ಯಕ್ಷರಾಗಿಯೂ ಪುನರಾಯ್ಕೆಗೊಂಡಿದ್ದಾರೆ.
ಉಳಿದಂತೆ ನಿರ್ದೇಶಕರಾಗಿ ಲಕ್ಷ್ಮಣ ಪ್ರಭು ಕುಂಬಳೆ, ಶಂಕರನಾರಾಯಣ ಭಟ್, ರಾಧಾಕೃಷ್ಣ ನಾಯಕ್, ಪ್ರದೀಪ ಕುಮಾರ್ ಶೆಟ್ಟಿ, ಹನೀಫ್ ಮೇರ್ಕಳ, ಪ್ರಕಾಶ್ ಕೆ, ಚಂದ್ರ ಕಾಜೂರು, ನಜೀಬುಲ್ಲ ಶೇಣಿ, ಜೆಸಿಂತಾ ಡಿಸೋಜ, ಪುಷ್ಪಾ, ಪ್ರತೀಕ್ಷಾ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.
ಮಂಜೇಶ್ವರ ತಾಲೂಕು ರೂಪೀಕರಣಗೊಂಡ ಬಳಿಕ ಕಾಸರಗೋಡು ಕೃಷಿ ಅಭಿವೃದ್ಧಿ ಸಹಕಾರಿ ಬ್ಯಾಂಕಿನಿಂದ ವಿಭಜನೆಗೊಂಡು 2016 ರಲ್ಲಿ ಸ್ವತಂತ್ರ ವಾಗಿ ಅಸ್ತಿತ್ವಕ್ಕೆ ಬಂದ ಮಂಜೇಶ್ವರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾಗಿ ಸೋಮಶೇಖರ ಜೆ. ಎಸ್. ಮತ್ತು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ. 2021 ರಲ್ಲಿ ಕಾಂಗ್ರೆಸ್ಸಿನ ಒಂದು ಬಣ ಸಹಕಾರ ಭಾರತಿ ಜತೆ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದರೂ ಪರಾಭವಗೊಂಡಿತ್ತು. ಬಳಿಕದ ದಕ್ಷ ಆಡಳಿತೆ ಬ್ಯಾಂಕ್ ನ ಕಾರ್ಯಚಟುವಟಿಕೆ, ನೂತನ ಸ್ವಂತ ಕಟ್ಟಡ ಮೊದಲಾದ ಸಾಧನೆಗಳ ಮೂಲಕ ರಾಜ್ಯದಲ್ಲಿಯೇ ಶ್ರೇಷ್ಠ ಬ್ಯಾಂಕ್ ಆಗಿ ಗುರುತಿಸಲ್ಪಡುತ್ತಿದೆ.

0 Comments