ಸುರತ್ಕಲ್ : ಮುಲ್ಕಿ ರಾಮಕ್ಷತ್ರಿಯ ಸಂಘದ ನಿಕಟಪೂರ್ವ ಅಧ್ಯಕ್ಷೆಯಾಗಿರುವ ರೇಖಾ ಸುದೇಶ್ ರಾವ್ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯೊಂದರಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ದುಬೈಗೆ ಭೇಟಿ ನೀಡಿದ್ದರು.
ರೇಖಾ ಸುದೇಶ್ ರಾವ್ ಅವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವವಾಗಿದ್ದು, ಲೇಖಕಿ, ಸಮಾಜ ಸೇವಕಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾಧಕಿಯಾಗಿದ್ದಾರೆ. ತಮ್ಮ ಕಾರ್ಯಕ್ರಮಗಳ ನಡುವೆ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ಅವರನ್ನು ಗೌರವಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣ್ ಉಪ್ಪೂರು ಸವಿತಾ ಉಪ್ಪೂರು, ನಿಕಟ ಪೂರ್ವ ಅಧ್ಯಕ್ಷ ಸುಗಂಧರಾಜ ಬೇಕಲ,. ಮಂಜುನಾಥ್ ಕಾಸರಗೋಡು ಹಾಗೂ ಈಶ್ವರ್ ಬೆಲ್ಕಿಯವರು ಭಾಗವಹಿಸಿದರು.

0 Comments