ಪೆರ್ಲ : ಶೇಣಿ ಶ್ರೀ ಶಾರದಾಂಬ ಎಯುಪಿ ಶಾಲಾ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಕಾರ್ಯಕ್ರಮವನ್ನು ಎಣ್ಮಕಜೆ ಪಂ.ಅಧ್ಯಕ್ಷೆ ಕುಸುಮಾವತಿ ಬಿ. ಉದ್ಘಾಟಿಸಿದರು. ಶಾಲಾ ಪ್ರಬಂಧಕಿ ಶಾರದ ವೈ ಅಧ್ಯಕ್ಷತೆವಹಿಸಿದ್ದರು. ಪುತ್ತಿಗೆ ಪಂ.ಅಧ್ಯಕ್ಷೆ ಫಿದಾ ಉಜಾಂಪದವು,ಕೊಡುಗೈ ದಾನಿ ಕುಂಞಿಮ್ಮದ್ ಹಾಜಿ ಎಸ್.ಯು, ಮುಖ್ಯ ಅತಿಥಿಗಳಾಗಿದ್ದರು. ಜಿ.ಪಂ. ಸದಸ್ಯ ಸೋಮಶೇಖರ್ ಜೆ.ಎಸ್,ಎಣ್ಮಕಜೆ, ಪಂ ಉಪಾಧ್ಯಕ್ಷ ಸಿದ್ದೀಕ್ ವಳಮುಗೇರ್, ಬ್ಲೋಕ್ ಪಂ.ಸದಸ್ಯೆ ಮಿಸ್ರಿಯ ಕರೀಂ, ಪುತ್ತಿಗೆ ಪಂ.ಸದಸ್ಯೆ ರಝೀನಾ ಆಸಿಫಾಲಿ, ಎಣ್ಮಕಜೆ ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯ ಕೆ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಮ್ಲ, ಪಂ.ಸದಸ್ಯ ಶರತ್ಚಂದ್ರ ಶೆಟ್ಟಿ ಎಂ.ಎಸ್, ಕೇರಳ ಗ್ರಾಮೀಣ ಬ್ಯಾಂಕ್ ಶೇಣಿ ಶಾಖಾ ಪ್ರಬಂಧಕ ವಿಷ್ಣು ವಿನು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪೆರ್ದನೆ, ಉಪಾಧ್ಯಕ್ಷ ಮಹೇಶ್ ಪುಣಿಯೂರು, ಮಾತೃ ಸಂಘದ ಅಧ್ಯಕ್ಷೆ ಪ್ರಜ್ವಲಿ, ಪ್ರಾಂಶುಪಾಲ ಶಾಸ್ತಾ ಕುಮಾರ್, ವಿಲ್ಸನ್ ಡಿಸೋಜ, ಉಮ್ಮರ್ ಕಂಗಿನಮೂಲೆ, ಅಬ್ದುಲ್ ಮುಂತಾರಲಿ, ರವೀಂದ್ರನಾಥ ನಾಯಕ್ ಶೇಣಿ ತೋಟದಮನೆ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಸುರೇಖ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಉಪಜಿಲ್ಲಾ ಹಾಗೂ ಜಿಲ್ಲಾ ಮಟ್ಟದ ವಿವಿಧ ಸೃಜನಾತ್ಮಕ ಸ್ಪರ್ಧೆಗಳಲ್ಲಿ ಭಾಗವಹಿಸಿದವರನ್ನು ಅಭಿನಂದಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಮಾಸ್ತರ್ ಸ್ವಾಗತಿಸಿ, ಅಧ್ಯಾಪಕಿ ಸುರೇಖ ಕೆ.ಎನ್.ವಂದಿಸಿದರು. ಶ್ರೀಧರ ಮಾಸ್ತರ್ ಕುಕ್ಕಿಲ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

0 Comments