Ticker

6/recent/ticker-posts

Ad Code

ಬಿಜೆಪಿ ಬದಿಯಡ್ಕ ಮಂಡಲದ ಚುನಾಯಿತ ಜನಪ್ರತಿನಿಧಿಗಳ ಸಮಾವೇಶ

 


ಬದಿಯಡ್ಕ: ಚುನಾಯಿತ ಜನಪ್ರತಿನಿಧಿಗಳು  ಜನರ ಜತೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ವಿಧಾನಸಭಾ ಚುನಾವಣೆಯ ಸಂಘಟನಾ ಚಟುವಟಿಕೆಯ ಅಂಗವಾಗಿ ಬಿಜೆಪಿ ಬದಿಯಡ್ಕ ಮಂಡಲದ ಚುನಾಯಿತ ಜನಪ್ರತಿನಿಧಿಗಳ ಸಮಾವೇಶವನ್ನು ಮಂಡಲ ಕಚೇರಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಯಾವಾಗಲೂ ಜನರು ಗುರುತಿಸುತ್ತಾರೆ. ಆದುದರಿಂದ ಜನರ ಸೇವೆಗಾಗಿ ನಿರಂತರ ಕೆಲಸ ಮಾಡಬೇಕು ಎಂದರು. ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ.ಅಧ್ಯಕ್ಷತೆ  ವಹಿಸಿದರು. ಪಕ್ಷದ ಕೋಜಿಕ್ಕೋಡು ವಲಯ ಅಧ್ಯಕ್ಷ ಹಾಗೂ ಕಾಸರಗೋಡು ‌ವಿಧಾನಸಭಾ ಮಂಡಲದ ಪ್ರಭಾರಿ ಅಡ್ವ.ಕೆ.ಶ್ರೀಕಾಂತ್, ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ರಾಜ್ಯ ಸಮಿತಿ ಸದಸ್ಯ ಹಾಗೂ ಚುನಾವಣಾ ಸಮಿತಿ ಸಂಚಾಲಕ ರವೀಶ ತಂತ್ರಿ ಕುಂಟಾರು, ಜಯಪ್ರಕಾಶ್, ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ, ಗ್ರಾಮ ಪಂಚಾಯತು ಅಧ್ಯಕ್ಷರುಗಳು, ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಸ್ವಾಗತಿಸಿದರು. ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬೆಳ್ಳೂರು ವಂದಿಸಿದರು.

Post a Comment

0 Comments