Ticker

6/recent/ticker-posts

Ad Code

ಎಣ್ಮಕಜೆ ಪಂ.ನಲ್ಲಿ ಲೈಫ್ ವಸತಿ ಯೋಜನೆ ಕೀಲಿ ಕೈ ಹಸ್ತಾಂತರ : ಫಲಾನುಭವಿಗಳ ಸಭೆ

 

ಪೆರ್ಲ : ಎಣ್ಮಕಜೆ ಪಂಚಾಯತ್ ಲೈಫ್ ವಸತಿ ಯೋಜನೆಯ ಕೀಲಿ ಕೈ ಹಸ್ತಾಂತರ ಸಮಾರಂಭ ಮತ್ತು ಫಲಾನುಭವಿಗಳ ಸಭೆ  ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಪಂ ಅಧ್ಯಕ್ಷೆ ಕುಸುಮಾವತಿ ಬಿ.ಉದ್ಘಾಟಿಸಿ ಮಾತನಾಡಿ, ಯೋಜನೆ ಸಂಬಂಧಿಸಿ 260 ಫಲಾನುಭವಿಗಳಿಗೆ ಮೊದಲ ಕಂತಿನ ಹಣ ನೀಡಲಾಗಿದೆ. ಒಪ್ಪಂದ ಪತ್ರಕ್ಕೆ ಸಹಿ ಹಾಕಿದ ಎಲ್ಲರಿಗೂ ಮೊದಲ ಕಂತಿನ ಹಣ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ ಅಬೂಬಕರ್ ಸಿದ್ದಿಕ್ ವಳಮುಗರು ಅಧ್ಯಕ್ಷತೆ ವಹಿಸಿ ಮಾತನಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಇನ್ನಿತರ ವ್ಯವಸ್ಥೆಗಳು ಇಲ್ಲದವರನ್ನು ಗುರುತಿಸಿ ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಮ್ಲಾ ಇಬ್ರಾಹಿಂ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯ ಕೆ, ಸದಸ್ಯರಾದ ಪ್ರಮೀಳಾ, ಪುಷ್ಪಾವತಿ, ಆಯಿಷಾ ಎ.ಎ, ಆಯಿಷತ್ ರಬಿಯಾ, ರಾಮಚಂದ್ರ ಎಂ, ನಳಿನಾಕ್ಷಿ ಸಿ.ಸಿ., ಕೃಷ್ಣಪ್ಪ, ಸೌದಾಬಿ ಹನೀಫ್, ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎಸ್.ಗಾಂಭೀರ್ ಮಾತನಾಡಿದರು. ವಿ.ಇ.ಒ. ಪ್ರಮೋದ್ ಆರ್.ಆರ್. ವರದಿ ಮಂಡಿಸಿದರು. ಪ್ರಭಾರ ಕಾರ್ಯದರ್ಶಿ ಗಿರೀಶ್ ಟಿ. ಸ್ವಾಗತಿಸಿದರು. ಹೆಡ್ ಕ್ಲರ್ಕ್ ವಿನೋದ್ ವಂದಿಸಿದರು.

Post a Comment

0 Comments