Ticker

6/recent/ticker-posts

Ad Code

ಧ.ಗ್ರಾ.ಯೋಜನೆಯ ಕುಂಡಂಗುಳಿ ಒಕ್ಕೂಟದ ವಾರ್ಷಿಕೋತ್ಸವ ಮತ್ತು ಭಜನಾ ಮಂಗಳೋತ್ಸವ ಸಂಪನ್ನ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಬಿ ಸಿ ಟ್ರಸ್ಟ್ ಕಾಸರಗೋಡು ತಾಲೂಕು, ಎಡನೀರು ವಲಯದ ಕುಂಡಂಗುಳಿ ಕಾರ್ಯಕ್ಷೇತ್ರದ ಕುಂಡಂಗುಳಿ ಒಕ್ಕೂಟದ ವಾರ್ಷಿಕೋತ್ಸವ ಮತ್ತು ಭಜನಾ ಮಂಗಳೋತ್ಸವ ಕಾರ್ಯಕ್ರಮ ಸ್ಥಳೀಯ ವ್ಯಾಪಾರಿ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು  ಚರಳಿಲ್ ರಾಘವನ್ ಗುರುಸ್ವಾಮಿ ಅವರು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ 2 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ  ಎ ಬಾಬು ನಾಯಕ್  ಅವರು ಭಾಗವಹಿಸಿ ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯು ಇಂದು ಎಲ್ಲಾ ಪಾಲುದಾರ ಬಂಧುಗಳಿಗೆ ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕ ಸಹಾಯವನ್ನು ನೀಡುತ್ತಿದ್ದು ಇದು ಅಭಿವೃದ್ಧಿಗೆ ಪೂರಕವಾಗಿದೆ ಸಂಘದ ಎಲ್ಲಾ ಸದಸ್ಯರು ಸಂಘದ ಶ್ರೇಣಿಯನ್ನು ಕಾಪಾಡಿಕೊಂಡು, S ಗ್ರೇಡ್ ನಿರ್ವಹಣೆ ಮಾಡುವಂತೆ ಕರೆ ನೀಡಿದರು. ಅಲ್ಲದೆ ಕಾರ್ಯಕ್ರಮದಲ್ಲಿ ಭಕ್ತಿ ಭಜನೆ ಮತ್ತು ಮನುಷ್ಯನ ಜೀವನ ನಿರ್ವಹಣೆಯಲ್ಲಿ ಧಾರ್ಮಿಕ ನಂಬಿಕೆಗಳು ಬಹಳ ಮುಖ್ಯ ಪಾತ್ರವಹಿಸುತ್ತದೆ. ಆಹಾರ ಸಂಸ್ಕಾರ ಮತ್ತು ನಮ್ಮ ದಿನನಿತ್ಯದ ಬದುಕಿಗೆ ಭಜನೆ ಉತ್ತಮ ದಾರಿಯಾಗಿದೆ ಎಂದರು. ವಾಗ್ಮಿ ರಾಜನ್ ಮುಳಿಯಾರ್,  ಕಾಸರಗೋಡು ತಾಲೂಕು ಯೋಜನಾಧಿಕಾರಿ  ದಿನೇಶ್ ಅವರು ಸಂಘದ ಸದಸ್ಯರಿಗೆ ಮಾಹಿತಿ ಮಾರ್ಗದರ್ಶನ ನೀಡಿದರು, ರಾಧಾಕೃಷ್ಣ ಭಟ್, ದಾಕ್ಷಾಯಿಣಿ  ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು. ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ನವೀನ ಕುಮಾರಿ ಸ್ವಾಗತಿಸಿ, ಅಶ್ವಥ್ ಹಾಗೂ ಹರೀಶ್ ಅವರು ನಿರೂಪಿಸಿದರು. ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಹಾಗೂ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Post a Comment

0 Comments