ಕುಂಬಳೆ: ಕುಂಬಳೆ ದೇವಸ್ಥಾನ ರಸ್ತೆಯಲ್ಲಿರುವ ಗೀತಾ ಜ್ಯುವೆಲ್ಲರಿ ಮಾಲಕರೂ, ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿದ್ದ, ಕುಂಬಳೆ ಹೈಸ್ಕೂಲ್ ಬಳಿಯ ನಿವಾಸಿ, ಕೆ. ಜನಾರ್ಧನ ಆಚಾರ್ಯ ಕುಂಬಳೆ (86) ಬುಧವಾರ ಸಂಜೆ ನಿಧನರಾದರು. ಮೃತರು ಪತ್ನಿ ವೇದಾವತಿ, ಮಕ್ಕಳಾದ ಮನೋಹರ, ಗೀತಾ, ವಸಂತ, ಸೊಸೆಯಂದಿರಾದ ವಿಜಯಲಕ್ಷ್ಮಿ (ಅನು), ನಿರ್ಮಲ, ವಿದ್ಯಾಜ್ಯೋತಿ, ಅಳಿಯ ದುರ್ಗಾದಾಸ್, ಸಹೋದರರಾದ ಲಕ್ಷ್ಮಣ ಆಚಾರ್ಯ, ಗೋಪಾಲಕೃಷ್ಣ ಆಚಾರ್ಯ, ಮೊದಲಾದವರನ್ನು ಅಗಲಿದ್ದಾರೆ. ಮೃತರ ಒರ್ವ ಪುತ್ರ ಉದಯ ಆಚಾರ್ಯರು ಈ ಹಿಂದೆ ನಿಧನರಾಗಿದ್ದಾರೆ.

0 Comments