Ticker

6/recent/ticker-posts

Ad Code

ಗೋವಿಂದ ಲಚ್ಚಿಲ್ ಕೊರಗತನಿಯ ಸಾನಿಧ್ಯ ತೃತೀಯ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪಾವೂರು: ಶ್ರೀ ಕೊರಗತನಿಯ ಸಾನಿಧ್ಯ ಗೋವಿಂದ ಲಚ್ಚಿಲ್ ಕೊಂಡೆವೂರು ಇದರ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಕೊರಗತನಿಯ ಕೋಲೋತ್ಸವವೂ ಎಪ್ರಿಲ್ 3ರಂದು ನಡೆಯಲಿರುವುದು. ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕೊಂಡೆವೂರು ಇಲ್ಲಿ ಕ್ಷೇತ್ರದ ಪುರೋಹಿತರಾದ  ವಿಷ್ಣುಭಟ್ ದೇವರಲ್ಲಿ ಪ್ರಾರ್ಥಿಸಿ ಬಿಡುಗಡೆಗೊಳಿಸಿದರು. ಕ್ಷೇತ್ರದ ಅಧ್ಯಕ್ಷ ಸೋಮನಾಥ ಕಾರಂತ ಮರಿಕಾಪು , ಕ್ಷೇತ್ರದ ಆಡಳಿತ ಮೊಕ್ತೇಸರ ಐತ್ತಪ್ಪ ಶೆಟ್ಟಿ ದೇವಂದ ಪಡ್ಪು , ಮೊಕ್ತೇಸರರಾದ  ಪದ್ಮನಾಭ ಅಡ್ಯಂತಾಯ ಕಾಪು, ಅರುಣ್ ಕುಮಾರ್ ಶೆಟ್ಟಿ  ಪೆರ್ಮನಂಜಿ, ಜಯಪ್ರಕಾಶ್ ಡ್ಯಂತಾಯ ಕಾಪು , ರವಿಮುಡಿಮಾರು, ಕ್ಷೇತ್ರದ ಪದಾಧಿಕಾರಿಗಳಾದ ಚಂದ್ರಹಾಸ ಅಂಚನ್ ಮುಡಿಮಾರು , ಮಾಧವ ಪೂಜಾರಿ ಕುದುಕೋರಿ, ಪ್ರಶಾಂತ್ ಭಂಡಾರಿ ಚಾವಡಿ ಬೈಲು ಗುತ್ತು , ವಾಮನ ಮುಡಿಮಾರ್, ಚಿದಂಬರ ಶೆಟ್ಟಿ ಕೊಂಡೆವೂರು ವಿಶ್ವನಾಥ ಶೆಟ್ಟಿ , ಜೀವನ್ ಮುಡಿಮಾರು, ರಾಜೇಶ್ ಮುಡಿಮಾರು, ದಯಾನಂದ ಕರ್ಕೇರ, ಸುರೇಶ್ ಪೆರ್ಮನಂಜಿ , ಉಮೇಶ್ ಕೊಂಡೆವೂರು , ಅಲ್ಲದೆ ಮಹಿಳಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Post a Comment

0 Comments