ಮುಳ್ಳೇರಿಯ: ಪಿ.ಎ. ಕಾಂಪ್ಲೆಕ್ಸ್ ಕ್ವಾರ್ಟರ್ಸ್ ಕೊಠಡಿಯ ಬಾಗಿಲು ಒಡೆದು ಲ್ಯಾಪ್‌ಟಾಪ್ ಮತ್ತು ಇತರ ಉಪಕರಣಗಳನ್ನು ಕದ್ದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಚೆರ್ಕಳ ಬಾಲಡ್ಕದ ಹನೀಫ್ (52) ಎಂಬಾತನನ್ನು ಅಡೂರು ಎಸ್‌ಐ ಜಾನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಫೆಬ್ರವರಿ 25 ರಂದು ಬೆಳಿಗ್ಗೆ 11 ರಿಂದ ರಾತ್ರಿ 11 ಗಂಟೆಯ ನಡುವೆ ಈತ ಉತ್ತರ ಪ್ರದೇಶ ಮೂಲದ ರಿಹಾನ್ ಅಶ್ರಫ್ ಎಂಬವರ ಕೊಠಡಿಯಲ್ಲಿ ದರೋಡೆ ನಡೆಸಿದ್ದ. ಬಾಗಿಲು ಮುರಿದು 300 ರೂ.ಗಳಿದ್ದ ಪರ್ಸ್, 37,000 ರೂ. ಮೌಲ್ಯದ ಲ್ಯಾಪ್‌ಟಾಪ್, ಚಾರ್ಜರ್ ಮತ್ತು ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಮೈಕ್ರೊಫೋನ್ ಕದ್ದಿದ್ದ. ರಿಹಾನ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅಡೂರು ಪೊಲೀಸರು, ಹತ್ತಿರದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಹನೀಫ್‌ನನ್ನು ಬಂಧಿಸಿದ್ದಾರೆ.

0 Comments