ಮಂಜೇಶ್ವರ : ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಅವರು ಮೀಂಜ ಮತ್ತು ಪೈವಳಿಕೆ ಪಂಚಾಯತ್ ಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.. ಬೆಳಗ್ಗೆ ದೈಗೋಳಿಯಿಂದ ಆರಂಭವಾಗಿ ಮಜೀರ್ ಪಳ್ಳ, ಗಾಂಧಿನಗರ, ಮದಂಗಲ್ಲು, ಮೀಯಪದವು, ಚಿಗುರುಪಾದೆ, ಬಾಳಿಯೂರು , ಮೂಡಂಬೈಲ್ ನಲ್ಲಾಗಿ ಕಡಂಬಾರಿನಲ್ಲಿ ಸಮಾರೋಪಗೊಂಡಿತು. ಮಧ್ಯಾಹ್ನ ಲಾಲ್ ಬಾಗ್, ಬಾಯಾರು ಪದವು, ಶಿರಂತಡ್ಕ, ಸುಂಕದಕಟ್ಟೆ, ಕುರುಡಪದವು, ಮುಳಿಗದ್ದೆ, ಪೆರೋಡಿ, ಬಳ್ಳೂರು, ಕನಿಯಾಲ, ಚೇರಾಲ್, ಸಜಂಕಿಲ, ಧರ್ಮತ್ತಡ್ಕ, ಪೆರ್ಮುದೆ, ಸುಬ್ಬಯ ಕಟ್ಟೆ, ಕಯ್ಯಾರು ಗ್ರಾಮ, ಕೊಕ್ಕೆಜಾಲ್, ಜೋಡುಕಲ್ಲು, ಬಾಯಿಕಟ್ಟೆ ಎಂಬೆಡೆಗಳಲ್ಲಿ ಪ್ರಚಾರ ನಡೆಸಿದರು.
ಯು.ಡಿ.ಎಫ್ ಕ್ಷೇತ್ರದ ಅಧ್ಯಕ್ಷ ಅಝೀಝ್ ಮರಿಕೆ, ಸಂಚಾಲಕ ಮಂಜುನಾಥ ಆಳ್ವ, ಟಿ.ಎ.ಮೂಸಾ, ಎಂ.ಅಬ್ಬಾಸ್, ಎ. ಕೆ ಆರಿಫ್, ಲಕ್ಷ್ಮಣ ಪ್ರಭು, ಹರ್ಷಾದ್ ವರ್ಕಾಡಿ, ಅಝೀಝ್ ಕಳತ್ತೂರು, ಇರ್ಫಾನಾ ಇಕ್ಬಾಲ್, ಯು.ಕೆ ಸೈಫುಲ್ಲಾ ತಂಗಳ್, ಹಾದಿ ತಂಗಲ್, ಡಿ.ಎಂ.ಕೆ ಮಹಮ್ಮದ್, ಅಬ್ದುಲ್ಲ ಮಾಡೇರಿ, ಖಾಲಿದ್ ದುರ್ಗಿಪಳ್ಳ, ಸೋಮಪ್ಪ, ದಾಮೋದರನ್ ಮಾಸ್ಟರ್, ಮಜೀದ್ ಪಚ್ಚಂಬಳ, ಸಿದ್ಧಿಕ್ ದಂಡೆಗೋಳಿ, ತಾಜುದ್ದೀನ್ ಕಡಂಬಾರ್, ಸವಾದ್ ಅಂಗಡಿಮುಗೇರು ಮೊದಲಾದವರು ವಿವಿಧೆಡೆಗಳಲ್ಲಿ ಮಾತನಾಡಿದರು. ಮಂಗಳವಾರ ಮಂಜೇಶ್ವರ ಮತ್ತು ವರ್ಕಾಡಿ ಪಂಚಾಯತ್‌ಗಳಲ್ಲಿ ಪರ್ಯಟನೆ ನಡೆಸಲಿದ್ದಾರೆ.

0 Comments