ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಅಶೋಕ್ ಕೊಡ್ಲಮೊಗರುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಾಯ ರವಿಶಂಕರ್, ಸಿತಾರ ಟೀಚರ್ ಶುಭ ಹಾರೈಸಿದರು. ಬಿ .ಪಿ. ಸಿ ರಾಜ ಗೋಪಾಲನ್ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಬಿ.ಆರ್.ಸಿ ಟ್ರೈನರ್ ಸುಮಯ್ಯ ಟೀಚರ್ ಸ್ವಾಗತಿಸಿ, ಸಿ ಆರ್ ಸಿ ಕೋರ್ಡಿನೇಟರ್ ಚಂದ್ರಿಕಾ ಟೀಚರ್ ವಂದಿಸಿದರು. ತಿಲಕ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಚಟುವಟಿಕೆಗಳು ಜರುಗಿದವು. ಮೊದಲ ದಿನದ ಸಂಪನ್ಮೂಲ ವ್ಯಕ್ತಿಗಳಾಗಿ ಪದ್ಮಸರೋಜ ಟೀಚರ್, ರಾಜೇಶ್ವರಿ ಟೀಚರ್, ರಶ್ಮಿ ಟೀಚರ್ ವಿವಿಧ ಚಟುವಟಿಕೆಗಳ ನೇತೃತ್ವ ವಹಿಸಿದರು. ಶೈಲಜಾ ಟೀಚರ್, ಶ್ಯಾಮಲ ಟೀಚರ್, ಚೈತ್ರ ಟೀಚರ್ ಸಹಕರಿಸಿದರು.

0 Comments