Ticker

6/recent/ticker-posts

Ad Code

ಜಿಲ್ಲೆಯ ಪ್ರಪ್ರಥಮ ಕನ್ನಡ ಸಂಜೆ ಪತ್ರಿಕೆ 'ಗಡಿನಾಡು' ಸಂಪಾದಕ, ಪ್ರಕಾಶಕ ಗಣೇಶ್ ಕೆ ನಿಧನ

 

ಕಾಸರಗೋಡು : ಜಿಲ್ಲೆಯ ಪ್ರಥಮ ಕನ್ನಡ ಸಂಜೆ ಪತ್ರಿಕೆ 'ಗಡಿನಾಡಿ'ನ   ಸಂಪಾದಕ, ಪ್ರಕಾಶಕ ಉಳಿಯತ್ತಡ್ಕ ಭಗವತೀ ನಗರ ನಿವಾಸಿ  ಗಣೇಶ್ ಕೆ (66) ನಿಧನರಾದರು. 

'ಸ್ಮಿತಾ ಪ್ರಿಂಟರ್ಸ್' ಸಂಸ್ಥೆಯ ಮಾಲೀಕರಾಗಿದ್ದ ಇವರು  ದಿ.ಕಿಟ್ಟು ಪೂಜಾರಿ ಮತ್ತು ಕೊರಪ್ಪಾಳು ದಂಪತಿ ಪುತ್ರ. ಮೃತರು ಪತ್ನಿ ಮಾಲತಿ, ಮಕ್ಕಳಾದ ಕೆ ಕಿಶೋರ್, ಸ್ಮಿತಾ, ಸೊಸೆ ಉಷಾ, ಅಳಿಯ ಕಮಲಾಕ್ಷ ಪೂಜಾರಿ, ಸಹೋದರ ಸಹೋದರಿಯರಾದ ಕೆ ಸೋಮಪ್ಪ, ಕೆ ಶಿವ, ಸುನಂದ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

Post a Comment

0 Comments