Ticker

6/recent/ticker-posts

Ad Code

ಉಪ್ಪಳದಲ್ಲಿ ರಸ್ತೆ ಮಧ್ಯೆ ಎಟಿಎಂ ವಾಹನ ತಡೆದು 5 ಕೋಟಿ ರೂ. ದರೋಡೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯ ಸೆರೆ

 

ಕಾಸರಗೋಡು : ಉಪ್ಪಳದಲ್ಲಿ ರಸ್ತೆ ಮಧ್ಯೆ ಎಟಿಎಂ ವಾಹನ ತಡೆದು 5 ಕೋಟಿ ರೂ. ದರೋಡೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಕೊನೆಗೂ ಬಂಧನಕ್ಕೊಳಗಾಗಿದ್ದಾನೆ‌.  ತಮಿಳುನಾಡಿನ ತಿರುಚಿರಾಪಳ್ಳಿ ನಿವಾಸಿ ಹಾಗೂ ಕುಖ್ಯಾತ 'ರಾಮ್‌ಜಿನಗರ ಗ್ಯಾಂಗ್' ಮುಖ್ಯಸ್ಥ ಆರುಮುಖನ್ (ಕಿಟ್ಟು) ಮಂಜೇಶ್ವರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನಿಖಾ ತಂಡವು ಛತ್ತೀಸ್‌ಗಢದಲ್ಲಿ  ಆತನನ್ನು ವಶಕ್ಕೆ ಪಡೆದುಕೊಂಡಿದೆ.  

ಕೇರಳವನ್ನು ಬೆಚ್ಚಿಬೀಳಿಸಿದ ದರೋಡೆ ಮಾರ್ಚ್ 27, 2024 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿತ್ತು. ಉಪ್ಪಳ ಪೇಟೆಯಲ್ಲಿ ಎಟಿಎಂಗಳಿಗೆ ಹಣ ತುಂಬಿಸಲು ಬಂದಿದ್ದ ಖಾಸಗಿ ಏಜೆನ್ಸಿಯ ವಾಹನ ತಡೆದು ದರೋಡೆ ನಡೆದಿದೆ. ಅಧಿಕಾರಿಗಳು ಎಟಿಎಂ ಕೌಂಟರ್ ಒಳಗೆ ಬರುವುದನ್ನು ಕಾಯುತ್ತಿದ್ದ ಶಂಕಿತರು ವಾಹನದ ಕಿಟಕಿ ಒಡೆದು 50 ಲಕ್ಷ ರೂಪಾಯಿ ಇದ್ದ ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾರೆ. ಗ್ಯಾಂಗ್ ನ ಕಾರ್ಯಾಚರಣೆ ಕೆಲವೇ ನಿಮಿಷಗಳಲ್ಲಿ ನಡೆದಿದ್ದು ಬಳಿಕ ಆರೋಪಿಗಳ ಪತ್ತೆಗಾಗಿ ಪೋಲಿಸರು ಕಾರ್ಯಾಚರಣೆ ನಿರತರಾಗಿದ್ದರು.

Post a Comment

0 Comments