Ticker

6/recent/ticker-posts

Ad Code

ಕಾಳ್ಯಂಗಾಡು ಬ್ರಹ್ಮಕಲಶೋತ್ಸವದ ಸರಸ್ವತಿ ಮಂಟಪದಲ್ಲಿ ಸರಣಿ ಭಜನಾ ಸಂಕೀರ್ತನಾ ಪ್ರವಾಹ

 

ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ನಡೆದುಬರುತ್ತಿರುವ ಬ್ರಹ್ಮಕಲೋತ್ಸವ ಸಂಬಂಧ ಚಟುವಟಿಕೆಗಳಲ್ಲಿ ಅತ್ಯಂತ ಗಮನಾರ್ಹ ವಿಚಾರ ಇಲ್ಲಿ ಸತತವಾಗಿ ನಡೆದುಬರುತ್ತಿರುವ ಭಜನೆಗಳ ಸರಣಿ. ಊರ-ಪರವೂರ ನೂರಾರು ಭಜನಾ ತಂಡಗಳು ಇಲ್ಲಿ ಸಂಕೀರ್ತನೆ ನಡೆಸಿಕೊಡುತ್ತಿವೆ. ಭಜನೆಗೆಂದೇ ಇಲ್ಲಿ ಸಿದ್ಧಪಡಿಸಿರುವ ಶ್ರೀ ಸರಸ್ವತಿ ಮಂಟಪದಲ್ಲಿ ಬೆರಳೆಣಿಕೆಯ ಇತರ ಕಾರ್ಯಕ್ರಮಗಳನ್ನು ಬಿಟ್ಟರೆ ಬಹುಪಾಲು ಭಜನೆಗಳೇ ನಡೆಯುತ್ತಿವೆ. ನವವಿಧ ಭಕ್ತಿಗಳಲ್ಲಿ ಅಗ್ರಮಾನ್ಯವಾಗಿರುವ ಶ್ರವಣ ಮತ್ತು ಕೀರ್ತನಗಳಿಗೆ ಮಹತ್ವವಿದ್ದು, ಮೂಕಾಂಬಿಕಾ ಕ್ಷೇತ್ರಕ್ಕೆ ಭಜನೆಯೊಮದಿಗಿರುವ ಸನಾತನ ಸಂಬಂಧವನ್ನೂ ಈ ಕ್ರಮ ಸಾಬೀತುಪಡಿಸಿದೆ. ಆಗಮಿಸಿದ ಎಲ್ಲ ಸಂಕೀರ್ತನೆಕಾರರಿಗೆ ಶಾಲು, ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುತ್ತಿದೆ. 

ಭಜನೆ ಸಮಿತಿಯ ಪದಾಧಿಕಾರಿಗಳಾದ ಗಣೇಶ ಕೇಳುಗುಡ್ಡೆ, ತಿರುಮಲೇಶ ಆಚಾರ್ಯ, ನಾರಾಯಣ ಕಾಳ್ಯಂಗಾಡು, ರೋಹಿತ್ ಮಧೂರು ಸಹಿತ ಹಲವು ಮಂದಿ ಈ ನಿಟ್ಟಿನಲ್ಲಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ. 

ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಸಲಹಾ ಸಮಿತಿಯ ರಘು ಮೀಪುಗುರಿ, ಭಾಸ್ಕರ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ನಾಯ್ಕ್ ಕಾಳ್ಯಂಗಾಡು, ಕೋಶಾಧಿಕಾರಿ ಶಾಂತಕುಮಾರ್ ಮುಂಡಿತ್ತಡ್ಕ, ಜತೆ ಕೋಶಾಧಿಕಾರಿ ಪುನೀತ್ ಕೆಮ್ಮಣ್ಣು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನರಾಜ್ ಕಾಳ್ಯಂಗಾಡು, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್., ಮಾತೃ ಸಮಿತಿ ಮತ್ತು ಇತರ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಆಸ್ತಿಕ ಬಾಂಧವರು  ಸಹಕಾರ ನೀಡುತ್ತಿದ್ದಾರೆ.

Post a Comment

0 Comments