Ticker

6/recent/ticker-posts

Ad Code

ಮೇ 16ಕ್ಕೆ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 5ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಸಂಸ್ಕೃತಿ ಉತ್ಸವ


 ಕಾಸರಗೋಡು : ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ 5ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಸಂಸ್ಕೃತಿ ಉತ್ಸವ–2026 ಇದೇ ಮೇ 16ರಂದು ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಈ ಮಹತ್ವದ ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆ  ನಡೆಯಿತು. ಸಭೆಯನ್ನು ಜಿ.ಪಂ. ಸದಸ್ಯ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಬಿ.ಎ. ಖಾದರ್ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತ್ ಸದಸ್ಯ ಬಿ.ಎ. ಬಶೀರ್ ಕೊಟ್ಟೂಡಲ್, ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ ರೈ ಹಾಗೂ ಅಜೀಜ್ ಚೇವಾರ್, ಲಕ್ಷ್ಮಣ ಪ್ರಭು, ನ್ಯಾಯವಾದಿ ಥೋಮಸ್ ಡಿ ಸೋಜಾ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ರವಿ ನಾಯ್ಕಾಪು ಸ್ವಾಗತಿಸಿದರು. 

ಸಭೆಯಲ್ಲಿ ಉತ್ಸವದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಬಿ.ಎ. ಖಾದರ್, ಅಧ್ಯಕ್ಷರಾಗಿ ಸೋಮಶೇಖರ ಜೆ.ಎಸ್., ಉಪಾಧ್ಯಕ್ಷರಾಗಿ ಬಿ.ಎ. ಬಶೀರ್, ಪ್ರಧಾನ ಸಂಚಾಲಕರಾಗಿ ಅಶೋಕ ಭಂಡಾರಿ ಆಯ್ಕೆಯಾದರು. ಸಂಚಾಲಕರಾಗಿ ಮುಹಮ್ಮದಲಿ ಹಾಗೂ ಬಿ.ಎ. ಅಬ್ದುಲ್ ಲತೀಫ್, ಕೋಶಾಧಿಕಾರಿಯಾಗಿ ಶ್ರೀಕಾಂತ್ ನೆಟ್ಟಣಿಗೆ ನೇಮಕಗೊಂಡರು.

ವಿವಿಧ ಉಪಸಮಿತಿಗಳು:ಹಣಕಾಸು : ರಾಘವ ಚೇರಾಲ್ (ಅಧ್ಯಕ್ಷ), ಎ.ಆರ್. ಸುಬ್ಬಯ್ಯಕಟ್ಟೆ(ಸಂಚಾಲಕ), ಆಹಾರ : ಶಶಿಕಲಾ ರೈ (ಅಧ್ಯಕ್ಷೆ), ಮುಹಮ್ಮದ್ ಕುಞಿ, ನಳಿನಾಕ್ಷಿ, ಪುಷ್ಪಾ (ಸಂಚಾಲಕರು), ಸಾಂಸ್ಕೃತಿಕ : ಸುಭಾಶ್ ಪೆರ್ಲ (ಅಧ್ಯಕ್ಷ ), ಎಸ್.ಕೆ. ಬಾಲಕೃಷ್ಣ (ಸಂಚಾಲಕ), ವೇದಿಕೆ ರವಿ ನಾಯ್ಕಾಪು (ಅಧ್ಯಕ್ಷ), ರಾಧಾಕೃಷ್ಣ ಉಳಿಯತ್ತಡ್ಕ (ಸಂಚಾಲಕ), ಮೆರವಣಿಗೆ : ಖಲೀಲ್ ಕೆ.ಕೆ.ಎಸ್ (ಅಧ್ಯಕ್ಷ), ಅಬ್ಬಾಸ್, ಅಶ್ರಫ್ ಸುಬ್ಬಯ್ಯಕಟ್ಟೆ, ಬಾಪಕುಞಿ ಕುಡಾಲ್ (ಸಂಚಾಲಕರು), ಅಲಂಕಾರ: ಮನಾಫ್ ಸುಬ್ಬಯ್ಯಕಟ್ಟೆ (ಅಧ್ಯಕ್ಷ), ಆನಂದ ಲಂಕಿನಡ್ಕ, ಎಸ್.ಕೆ. ಚಂದ್ರಶೇಖರ (ಸಂಚಾಲಕರು).

ಇಡೀ ದಿನ ನಡೆಯುವ ಈ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಿರಿಯ ಸಾಧಕ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಚಿವರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Post a Comment

0 Comments