ಪೆರ್ಲ: ವಾಣೀನಗರ ಕುತ್ತಾಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಧರ್ಮದೈವ ಶ್ರೀ ರಕ್ತೇಶ್ವರಿ ದೈವದ ನೇಮ ಹಾಗೂ ಬೊಟ್ಟಿ ಆಯನ (ಒಂದು ಕುಂದು ನಲ್ವತ್ತು ದೈವಗಳ ನೇಮ) ಏ.7ರಿಂದ 9ರವರೆಗೆ ನಡೆಯಲಿದೆ. ಏ.6ರಂದು ಸಂಜೆ 4ಕ್ಕೆ ಇಳಂತೋಡಿ ಅಂಗನವಾಡಿ ಪರಿಸರ ಹಾಗೂ 4.30ಕ್ಕೆ ವಾಣೀನಗರ ಶ್ರೀಕೃಷ್ಣ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ ಹೊರಟು ಕುತ್ತಾಜೆ ಸೇತುವೆ ಬಳಿಯಿಂದ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತಲುಪಿಸಲಾಗುವುದು.
ಏ.7ರಂದು ಸಂಜೆ 6.15ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಹಾಪೂಜೆ, 6.30ಕ್ಕೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ 7ಕ್ಕೆ ಶ್ರೀ ರಕ್ತೇಶ್ವರಿ ದೈವದ ತೋಡಂಙಲ್, 8ಕ್ಕೆ ಶ್ರೀ ಪಡ್ಡೆಯಿ ಧೂಮಾವತಿ ದೈವದ ತೊಡಂಙಲ್, 8.30ಕ್ಕೆ ಮೋಂದಿ ಕೋಲ, 9.30ರಿಂದ ಅನ್ನಸಂತರ್ಪಣೆ, 11.30ರಿಂದ ಪೊಟ್ಟನ್ ದೈವ, ಸಪರಿವಾರ ರಕ್ತೇಶ್ವರಿ ದೈವದ ನೇಮೋತ್ಸವ, ಏ.8ರಂದು ಬೆಳಗ್ಗೆ 7ರಿಂದ ಶ್ರೀ ಧೂಮಾವತಿ ದೈವದ ನೇಮ, 10ರಿಂದ ಕುರವೇ ದೈವದ ಕೋಲ, 11ರಿಂದ ಗುಳಿಗ ದೈವದ ಕೋಲ, ಮಧ್ಯಾಹ್ನ 12ರಿಂದ ಶ್ರೀ ಕೊರತಿ ದೈವದ ಕೋಲ, ಸಂಜೆ 4ರಿಂದ ಈರ್ವರು ಉಳ್ಳಾಕುಲು ದೈವಗಳ ಕೋಲ, ರಾತ್ರಿ 8.30ರಿಂದ ಎರುಕನಡ ದೈವದ ಕೋಲ, 9ರಿಂದ ಬಿಲ್ಲರೆ ದೈವದ ಕೋಲ 11ರಿಂದ ಬಬ್ಬರ್ಯ ಹಾಗೂ ಮಾಣಿಚ್ಚಿ ದೈವಗಳ ಕೋಲ, ತಡ ರಾತ್ರಿ 1ರಿಂದ ಶ್ರೀ ಮಲರಾಯ ಪಂಜುರ್ಲಿ ದೈವದ ಕೋಲ, ಏ.9ರಂದು ಬೆಳಗ್ಗೆ 5ರಿಂದ ಬ್ರಾಹ್ಮಣ ಮಾಣಿ ಕೋಲ, 6ರಿಂದ ಕುಂಡಗರೆ ಕೋಲ, 7ರಿಂದ ಗುಳಿಗ, ಮಾದಿರ, ಮಂತ್ರವಾದಿಗುಳಿಗನ ಕೋಲ ನಡೆಯಲಿದೆ. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಇರಲಿದೆ.

0 Comments