Ticker

6/recent/ticker-posts

Ad Code

ಮಂಜೇಶ್ವರದ ಜನ ಪ್ರೀತಿಯನ್ನು ಗಳಿಸಿಕೊಂಡು ಅಭಿವೃದ್ಧಿ ಕನಸುಗಳೊಂದಿಗೆ ಮತ ಯಾಚನೆಗೆ ಎಕೆಎಂ ಆಶ್ರಫ್ ಗೆ ಭಾರೀ ಜನ ಬೆಂಬಲ

 

ಕುಂಬಳೆ : ಮಂಜೇಶ್ವರ ಮಂಡಲದ ಮತದಾರರ ಸ್ನೇಹೋಪಚಾರಗಳನ್ನು ಸ್ವೀಕರಿಸುತ್ತಾ, ನಾಡಿನ ಅಭಿವೃದ್ಧಿ ಸಂಕಲ್ಪಗಳನ್ನು ಹಂಚುತ್ತಾ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರ ಮಂಡಲ ಪರ್ಯಟನೆ ಕುಂಬಳೆಯಲ್ಲಿ ಶುಕ್ರವಾರ ರಾತ್ರಿ ಸಮಾಪ್ತಿಗೊಂಡಿತು. ಮಾ.28ರಂದು ಪುತ್ತಿಗೆ ಪಂಚಾಯತ್‌ನಿಂದ ಪ್ರಾರಂಭವಾದ ಪ್ರವಾಸವು ನಿನ್ನೆ ರಾತ್ರಿ ಕುಂಬಳೆ ಕೊಯಿಪಾಡಿಯಲ್ಲಿ ಕೊನೆಗೊಂಡಿತು. ಎ.ಕೆ.ಎಂ. ಅಶ್ರಫ್ ಅವರ ಮಾತುಗಳು ಮಂಜೇಶ್ವರದ ಹೃದಯವನ್ನು ಮುಟ್ಟಿದವು. ಪರ್ಯಟನೆ ಹಾದುಹೋದ ಪ್ರತಿಯೊಂದು ಸ್ಥಳದಲ್ಲೂ ಮಹಿಳೆಯರು ಮತ್ತು ಮಕ್ಕಳು ಅಭ್ಯರ್ಥಿಯನ್ನು ಸ್ವಾಗತಿಸಿದರು. ಕುಂಬಳೆಯ ಪರ್ಯಟನೆ ಬೆಳಿಗ್ಗೆ ಮುಳಿಯಡ್ಕದಿಂದ ಪ್ರಾರಂಭವಾಯಿತು. ಕೊಡ್ಯಮ್ಮೆ, ಎಂ.ಎಂ. ನಗರ, ಕಳತ್ತೂರು, ಚೆಕ್ ಪೋಸ್ಟ್,  ಬಾಯಿಕಟ್ಟೆ,   ಬಂಬ್ರಾಣ, ಪಿ. ಕೆ ನಗರ, ಆರಿಕ್ಕಾಡಿ, ಕುಂಬೋಲ್ ಚೆರಿಯಪಲ್ಲಿ, ಆರಿಕ್ಕಾಡಿ ಕಡವತ್, ಸುನಾಮಿ ಕಾಲೋನಿ, ಶಾಂತಿಪಳ್ಳ, ಬದ್ರಿಯಾ ನಗರ, ಪೇರಾಲ್, ಮೈಮೂನ್ ನಗರ, ಮೊಗ್ರಾಲ್, ಕೊಪ್ಪಳ, ಪೆರ್ವಾಡ್ ಬೀಚ್‌ನಲ್ಲಿ ಸಾಗಿ ಕೊಯಿಪ್ಪಾಡಿ ಬೀಚ್‌ನಲ್ಲಿ ಸಮಾರೋಪಗೊಂಡಿತು. 

ಯು.ಡಿ.ಎಫ್ ಮಂಡಲ ಅಧ್ಯಕ್ಷ ಅಝೀಝ್ ಮರಿಕೆ, ಸಂಚಾಲಕ ಮಂಜುನಾಥ ಆಳ್ವ, ಟಿ.ಎ.ಮೂಸಾ, ಎಂ.ಅಬ್ಬಾಸ್, ಜೆ.ಎಸ್.ಸೋಮಶೇಖರ್ ಎ.ಕೆ.ಆರಿಫ್, ಲಕ್ಷ್ಮಣ ಪ್ರಭು, ಅಝೀಝ್ ಕಳತ್ತೂರು, ಸುಂದರ ಆರಿಕ್ಕಾಡಿ, ಸುರೇಶ್ ಶೆಟ್ಟಿ, ಬಶೀರ್ ವೆಲ್ಲಿಕೋತ್, ರವೂಫ್ ಬಾಯಿಕ್ಕೆರೆ, ಯು.ಕೆ.ಸೈಫುಲ್ಲಾ ತಂಗಳ್, ಹಾದಿ ತಂಗಳ್, ಡಿ.ಎಂ.ಕೆ. ಮಹಮ್ಮದ್, ಇರ್ಷಾದ್ ಮೊಗ್ರಾಲ್, ಬಿ.ಎಂ. ಮುಸ್ತಫ, ಸಿದ್ದೀಕ್ ದಂಡೆಗೋಳಿ, ಪಿ.ಎಂ. ಸಲೀಂ, ಅಬ್ದುಲ್ಲ ಮಾಡೇರಿ, ಎಂ.ಪಿ. ಖಾಲಿದ್, ಬಿ.ಎನ್. ಮಹಮ್ಮದಲಿ, ಟಿ.ಎಂ. ಶುಹೈಬ್, ಯೂಸುಫ್ ಉಳುವಾರ್, ಯು.ಪಿ. ತಾಹಿರಾ ಯೂಸುಫ್ ವಿವಿಧ ಕೇಂದ್ರಗಳಲ್ಲಿ ಮಾತನಾಡಿದರು.

Post a Comment

0 Comments