ಪೆರ್ಲ : ಮಣಿಯಂಪಾರೆ ದುರ್ಗಾನಗರ ಶ್ರೀ ದುರ್ಗಾಪರಮೇಶ್ವರಿ ನೂತನ ಭಜನಾ ಮಂದಿರ ನಿರ್ಮಾಣಕ್ಕೆ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶಿಲಾನ್ಯಾಸಗೈದರು. ತಂತ್ರಿ ಚಂದ್ರಶೇಖರ ನಾವಡ ಬಜಕೂಡ್ಲು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಶಿಲ್ಪಿ ಪದ್ಮನಾಭ ಆಚಾರ್ಯ ಸೀತಾಂಗೊಳಿ, ನಿರ್ಮಾಣ ಶಿಲ್ಪಿ ಮನೋಜ್ ಮಣಿಯಾಣಿ ತಚ್ಚಂಗಾಡ್ ಉಪಸ್ಥಿತರಿದ್ದರು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನಗೈಯುತ್ತಾ ಭಜನೆ ಎಂಬುದು ದೇವರನ್ನು ಸುಲಭ ಹಾಗೂ ಸುಲಲಿತವಾಗಿ ಒಲಿಸಿಕೊಳ್ಳುವ ಭಕ್ತಿ ಮಾರ್ಗವಾಗಿದ್ದು ಇದು ಪ್ರತಿ ಮನ ಹಾಗೂ ಮನೆಗಳಲ್ಲಿ ಮಾಡಬಹುದಾಗಿದೆ. ಆದರೆ ಭಜನಾ ಮಂದಿರದಂತಹ ಶ್ರಧ್ಧಾ ಕೇಂದ್ರಗಳು ನಮ್ಮ ಭಕ್ತಿಯ ಜತೆಗೆ ಸನಾತನ ಧರ್ಮದ ಒಗ್ಗಟ್ಟಿನ ಶಕ್ತಿಯನ್ನು ಪ್ರತಿಫಲಿಸುವ ತಾಣವಾಗಬೇಕು. ಹಾಗಾದರೆ ಮಾತ್ರ ಭಜನ ಮಂದಿರ ನಿರ್ಮಾಣದ ಕೆಲಸ ಕಾರ್ಯಗಳು ಸಾರ್ಥಕ ಎನಿಸುವುದು ಎಂದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಯೆಣ್ಮಕಜೆ ಅಧ್ಯಕ್ಷತೆವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಂಞಿಣ್ಣ ಮಾಸ್ತರ್ ನೆಕ್ಕರೆಪದವು, ಶ್ರೀರಾಂ ಭಟ್ ಗುಂಡಿತ್ತಾರು, ಸ್ಥಾಪಕ ಸದಸ್ಯ ಗೋವಿಂದ ನಾಯ್ಕ್ ಅರೆಮಂಗಿಲ, ಉದಯ ಚೆಟ್ಟಿಯಾರ್, ಬಿ.ಪಿ.ಶೇಣಿ, ಸಂಕಪ್ಪ ಸುವರ್ಣ ಬಾಡೂರು, ಗಂಗಾಧರ ಮಾಸ್ತರ್, ಸುರೇಶ್ ನಾಯ್ಕ್ ಕೆದ್ರೋಳಿ, ಜಯ ಮಣಿಯಂಪಾರೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.

0 Comments