Ticker

6/recent/ticker-posts

Ad Code

ಎನ್ ಡಿ ಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಅವರ ವಾಹನ ಪ್ರಚಾರ ರ‍್ಯಾಲಿಗೆ ಚಾಲನೆ

ಕಾಸರಗೋಡು: ಕಾಸರಗೋಡಿನ ಎನ್ ಡಿ ಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಕಾಸರಗೋಡಿನಲ್ಲಿ ವಾಹನ ಪ್ರಚಾರ ರ‍್ಯಾಲಿಗೆ ಚಾಲನೆ ನೀಡಿದ್ದಾರೆ. ನಗರದಲ್ಲಿ ಆರಂಭವಾದ ವಾಹನ ಪ್ರಚಾರ ರ‍್ಯಾಲಿಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲಕುಟ್ಟಿ ಚಾಲನೆ ನೀಡಿದರು. 

ಇಂದು ಕಾಸರಗೋಡು ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಅಶ್ವಿನಿ ಅವರ ಚುನಾವಣಾ ಪ್ರಚಾರ ಸಭೆಗಳನ್ನು ಅಬ್ದುಲ್ಲಕುಟ್ಟಿ ಉದ್ಘಾಟಿಸಿದರು. ಬೆಳಿಗ್ಗೆ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಎನ್ ಡಿ ಎ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.  

ಬಿ.ಸಿ. ರೋಡ್, ಅಣಂಗೂರು, ಕಾಸರಗೋಡು ರೈಲು ನಿಲ್ದಾಣ, ಚೇನೆಕ್ಕೋಡು, ಕೊಲ್ಲಂಗಾನ, ಮಧೂರು, ಚೌಕಿ, ಪೆರಿಯಡ್ಕ, ಪೆರ್ನಡ್ಕ, ಉಳಿಯತ್ತಡ್ಕ ಮೊದಲಾದೆಡೆಗಳ ಎನ್ ಡಿ ಎ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ.

Post a Comment

0 Comments