Ticker

6/recent/ticker-posts

Ad Code

ಏ 9,10ಕ್ಕೆ ಸೇರಾಜೆ ತರವಾಡು ಮನೆ ಧರ್ಮದೈವ ಧೂಮಾವತಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ನೇಮೋತ್ಸವ


ಪೆರ್ಲ : ಸೇರಾಜೆ ತರವಾಡು ಮನೆಯ ಧರ್ಮದೈವ ಧೂಮಾವತಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ನೇಮೋತ್ಸವಏ 09 ಮತ್ತು 10ರಂದು  ಜರಗಲಿರುವುದು. ಆ ನಿಮಿತ್ತ ಏ. 3ರಂದು ಗೊನೆ ಮುಹೂರ್ತ ನಡೆಸಲಾಯಿತು. 

ಏ. 9 ಗುರುವಾರ ಬೆಳಿಗ್ಗೆ ಗಂಟೆ 7-00 ಗಂಟೆಗೆ ಗಣಪತಿ ಹೋಮ, ಮುಡಿಪು ಶುದ್ಧ,  8-00ಗಂಟೆಗೆ  ಶ್ರೀ ರಕೇಶ್ವರಿ ದೈವದ ನೇಮ, ಮಧ್ಯಾಹ್ನ ಗಂಟೆ 1-00ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, 3-00ಕ್ಕೆ ಕೊರತ್ತಿ, ಗುಳಿಗ ದೈವದ ನೇಮ, ಸಂಜೆ 5-30ಕ್ಕೆ ಕಲ್ಲಾಲ್ದ ಗುಳಿಗ ದೈವದ ನೇಮ. ರಾತ್ರಿ ಗಂಟೆ 9-00ಕ್ಕೆ ಅನ್ನಸಂತರ್ಪಣೆ,  9-30ಕ್ಕೆ ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಮೂಕಾಂಬಿಕಾ ಗುಳಿಗ ದೈವಗಳ ಭಂಡಾರ ತೆಗೆದು ನೇಮೋತ್ಸವ. ಏ.10ರ  ಶುಕ್ರವಾರ ಬೆಳಿಗ್ಗೆ ಗಂಟೆ 5-00ಕ್ಕೆ ಪ್ರಸಾದ ವಿತರಣೆ ನಡೆಯಲಿರುವುದು. ಬೆಳಗ್ಗೆ  9-00ಗಂಟೆಗೆ ಧರ್ಮದೈವ ಧೂಮಾವತಿ ನೇಮೋತ್ಸವ, ಮಧ್ಯಾಹ್ನ 12-30ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿರುವುದು.

Post a Comment

0 Comments