ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ಜರಗುತ್ತಿದ್ದು, ವಿವಿಧೆಡೆಗಳಿಂದ ಹೊರೆಕಾಣಿಕೆ ಸುವಸ್ತುಗಳು ಹರಿದುಬರುತ್ತಿವೆ. ಭಾನುವಾರ ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು.
ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಡಾ| ಶ್ರೀನಿಧಿ ಸರಳಾಯ, ಜಗನ್ನಾಥ ರೈ ಕೊರೆಕ್ಕಾನ, ರಮೇಶ್ ಮುಳಿಯಡ್ಕ, ಆನಂದ ಬೈಕುಂಜ, ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ, ರಾಮನಾಯ್ಕ ಕುಂಟಾಲುಮೂಲೆ, ಶಿವರಾಮ ವಾಂತಿಚ್ಚಾಲು, ಹರೀಶ ಉಪ್ಲೇರಿ, ಸುಮಂಗಲಿನಿ ಮಾತೃಸಂಘದ ಸದಸ್ಯರು, ಗ್ರಾಮಸ್ಥರು, ಜಿ.ಕೆ.ಚಾರಿಟೇಬಲ್ ಟ್ರಸ್ಟ್ ನೇತೃತ್ವ ವಹಿಸಿದ್ದರು.

0 Comments