ಸುಳ್ಯ : ವ್ಯಕ್ತಿಯೊಬ್ಬರು ಕಣಜದ ಹುಳುಗಳು ಕಚ್ಚಿ ಸಾವನ್ನಪ್ಪಿದ ಘಟನೆ ಅರಂತೋಡು ಸಮೀಪದ ಪೆರಾಜೆ ಗ್ರಾಮದ ಹೊದ್ದೆಟ್ಟಿ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿ ಜಗದೀಶ್ ಎಂದು ಗುರುತಿಸಲಾಗಿದೆ. ತಮ್ಮ ತೋಟದಲ್ಲಿ ಕಳೆ ಕಟಾವು ಯಂತ್ರದಲ್ಲಿ ಕಾಡು ಕಡಿಯುತ್ತಿದ್ದ ಸಂದರ್ಭ ಕಣಜದ ಹುಳಗಳ ಗುಂಪು ಕಚ್ಚಿ ಗಂಭೀರ ಗಾಯಗೊಂಡರು. ಬಳಿಕ ಸ್ಥಳೀಯರು ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

0 Comments