ತಿರುವನಂತಪುರ : ಅಮ್ಯೂಸ್ ಮೆಂಟ್ ಪಾರ್ಕ್ ಒಂದರಲ್ಲಿ ರೈಡ್ ಮುರಿದು ಬಿದ್ದು ಅಪಘಾತ ಸಂಭವಿಸಿದೆ. ಮಾಹಿತಿಯ ಪ್ರಕಾರ ಹಲವರು ಗಾಯಗೊಂಡಿದ್ದಾರೆ. ವೆಂಬಯಂನಲ್ಲಿ ಕಾರ್ಯನಿರ್ವಹಿಸುತ್ತಿರುವ 'ಹ್ಯಾಪಿ ಲ್ಯಾಂಡ್' ನಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳಲ್ಲಿ ಒಂದೇ ಕುಟುಂಬದ ಮನೋರತಿ(54) ಸೀಮಣಿ(49) ಮಾಲಿನಿ (49) ಶ್ಯಾಮ್ ಡೇನಿಯಲ್ (14) ರೋಜ್ (16) ಎಂಬಿವರು ಸೇರಿದ್ದು, ತಮಿಳುನಾಡು ಮೂಲದವರು ಎಂದು ವರದಿಯಾಗಿದೆ. ರೈಡ್ ನಲ್ಲಿ ವೆಲ್ಡ್ ಮುರಿದು ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಸುಮಾರು ಮೂವತ್ತು ಜನರು ರೈಡ್ ನಲ್ಲಿದ್ದರು ಎಂದು ತಿಳಿದು ಬಂದಿದೆ.

0 Comments