Ticker

6/recent/ticker-posts

Ad Code

ಇ.ಡಿ ತಂಡದ ಮೇಲೆ ದಾಳಿ : ಕೊಲೆ ಯತ್ನ ಕೇಸು ದಾಖಲು

 

ತಿರುವನಂತಪುರ : ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರ ನಿವಾಸ ಪರಿಶೀಲಿಸಿದ ನಂತರ ಹಿಂತಿರುಗಿದ ಇ.ಡಿ ತಂಡದ ಮೇಲೆ ದಾಳಿ ನಡೆಸಿದವರ ವಿರುದ್ಧ ಕೊಲೆ ಯತ್ನ ಕೇಸು ದಾಖಲಿಸಲಾಗಿದೆ. ಎಫ್ ಆರ್ ನಲ್ಲಿ ಕೊಲೆಯತ್ನ, ಗಂಭೀರ ಗಲಭೆ, ಎರಡು ಗುಂಪುಗಳ ನಡುವೆ ದ್ವೇಷವನ್ನು ಉಂಟುಮಾಡುವುದು, ಕಾನೂನುಬಾಹಿರ ಗುಂಪುಗಾರಿಕೆ, ಕಾನೂನುಬಾಹಿರ ತಡೆಯೊಡ್ಡುವುದು, ಸಾರ್ವಜನಿಕ ನಿಂದನೆ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು, ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ಮಾರಕ ಆಯುಧಗಳಿಂದ ದಾಳಿ ಮತ್ತು ಸಾರ್ವಜನಿಕ ಸೊತ್ತುಗಳ ನಾಶಪಡಿಸುವುದು ಸೇರಿದಂತೆ ಹನ್ನೊಂದು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಕೋಲುಗಳು, ಕಲ್ಲುಗಳು ಮತ್ತು ಇಟ್ಟಿಗೆಗಳನ್ನು ಬಳಸಿ ದಾಳಿ ನಡೆಸಲಾಗಿದೆ. ಇ.ಡಿ ಅಧಿಕಾರಿಗಳ ಜೊತೆಗೆ, ಪೊಲೀಸರು ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಮೇಲೂ ದಾಳಿ ನಡೆಸಲಾಗಿದೆ. ಸುಮಾರು 3 ಲಕ್ಷ ರೂ. ಹಾನಿಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಘಟನೆಯಲ್ಲಿ ಐದು ಆರೋಪಿಗಳ ಬಂಧನವನ್ನು ದಾಖಲಿಸಲಾಗಿದೆ. ಶ್ರೀಜಿತ್, ಶಾಹಿನ್, ಮನೋಜ್, ನಿತಿನ್ ರಾಜ್ ಮತ್ತು ಜೀವನ್ ಅವರನ್ನು ಬಂಧಿಸಲಾಗಿದೆ. ದಾಳಿಯಿಂದ ಹಿಂತಿರುಗುತ್ತಿದ್ದ ಇ.ಡಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ ಘಟನೆಯಲ್ಲಿ ಗಂಭೀರ ಲೋಪವಾಗಿದೆ ಎಂದು ಗುಪ್ತಚರ ವರದಿ ಹೇಳುತ್ತದೆ. ಗುಪ್ತಚರ ಮುಖ್ಯಸ್ಥರು ಶೀಘ್ರದಲ್ಲೇ ಡಿಜಿಪಿ ಮತ್ತು ಗೃಹ ಕಾರ್ಯದರ್ಶಿಗೆ ವರದಿ ಸಲ್ಲಿಸಲಿದ್ದಾರೆ. ಘಟನೆಯ ಬಗ್ಗೆ ಇಲಾಖಾ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ. ಪಿಣರಾಯಿ ವಿಜಯನ್ ಅವರ ನಿವಾಸ ಮತ್ತು ಇತರ ಕೇಂದ್ರಗಳ ಮೇಲೆ ಇಡಿ ದಾಳಿ ನಡೆಸುವ ಬಗ್ಗೆ ಕೇರಳ ಪೊಲೀಸರಿಗೆ ಯಾವುದೇ ಮಾಹಿತಿ ಬಂದಿಲಿಲ್ಲವೆಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದಾಳಿ ಪ್ರಾರಂಭವಾದ ನಂತರ, ಪೊಲೀಸರು ಸೇರಿದಂತೆ ಪಿಣರಾಯಿ ಮತ್ತು ಕೋಝಿಕ್ಕೋಡ್‌ನಲ್ಲಿ ಜನರು ಜಮಾಯಿಸುವುದನ್ನು ಗಮನಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸ್ವಯಂಪ್ರೇರಣೆಯಿಂದ ಕಾರ್ಯಪ್ರವೃತ್ತರಾದರು. ಮಧ್ಯೆ ತಿರುವನಂತಪುರದಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಹಿಂಸಾಚಾರವನ್ನು ನಡೆಸಿದರು. ಹಿಂಸಾಚಾರ ನಡೆಸಿದ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಮಾಧ್ಯಮಗಳಿಗೆ ತಿಳಿಸಿದರು.

Post a Comment

0 Comments