ಚೆನ್ನೈ: ತಮಿಳುನಾಡಿನಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಮದ್ರಾಸ್ ಹೈಕೋರ್ಟ್ ಅಸಾಧಾರಣ ಆದೇಶವನ್ನು ಹೊರಡಿಸಿದೆ. 'ಹಿಂದೂ ಮಕ್ಕಳ್ ಕಕ್ಷಿ' ಯ ನಾಯಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ಪೀಠವು ಈ ತೀರ್ಪು ನೀಡಿದೆ. ಬಕ್ರೀದ್ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆಗೆ ಅವಕಾಶ ನೀಡಬಾರದು ಎಂದು ಅರ್ಜಿದಾರರು ವಾದಿಸಿದರು.
ಬಕ್ರೀದ್ ದಿನದಂದು ಮಾತ್ರವಲ್ಲದೆ, ಬೇರೆ ಯಾವುದೇ ದಿನದಂದು ಗೋಹತ್ಯೆಗೆ ಅವಕಾಶ ನೀಡಬಾರದು ಮತ್ತು ಆದೇಶವನ್ನು ಉಲ್ಲಂಘಿಸದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಶ್ರೀಕೃಷ್ಣನ ಕಾಲದಿಂದಲೂ ಗೋವನ್ನು ಪೂಜಿಸಲಾಗುತ್ತಿದೆ. ಅನೇಕ ಮುಸ್ಲಿಂ ರಾಜರು ಕೂಡಾ ಗೋಹತ್ಯೆಯನ್ನು ನಿಷೇಧಿಸಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

0 Comments