ಪೈವಳಿಕೆ : 'ಬಿರುವೆರ್ ಕುಡ್ಲ' ಪೈವಳಿಕೆ ಘಟಕದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜರಗಿತು. ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ತತ್ವವನ್ನು ಜಗತ್ತಿಗೆ ಕೊಟ್ಟು ಜಗತ್ತಿಗೆ ಜಗದ್ಗುರುವಾಗಿರುವ ಬ್ರಹ್ಮಶ್ರೀ ನಾರಾಯಣ ಗುರುವಿನ ತತ್ವ ಸಿದ್ಧಾಂತದಂತೆ, ವಿದ್ಯೆಯಿಂದ ಸ್ವತಂತ್ರರಾಗಿರಿ ಎಂಬಂತೆ ಕಳೆದ ನಾಲ್ಕು ವರ್ಷದಿಂದ ಬಿರುವೆರ್ ಕುಡ್ಲ ಪೈವಳಿಕೆ ಘಟಕದ ವತಿಯಿಂದ ಮಕ್ಕಳಿಗೆ ಪುಸ್ತಕ ಕೊಡುವ ಕಾರ್ಯವು ನಡೆಯುತ್ತಾ ಬರುತ್ತಿತ್ತು. ಈ ವರ್ಷ 5ನೇ ವರ್ಷದ ಸೇವಾ ಯೋಜನೆಯಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಗಣೇಶ್ ಸ್ಥಾನದ ಮನೆ ಇವರ ಅಧ್ಯಕ್ಷತೆಯಲ್ಲಿ ಇತ್ತಿಚೇಗೆ ಮುಳಿಗದ್ದೆ ಬ್ರಹ್ಮಶ್ರೀ ನಾರಾಯಣ ಗುರು ಕಾರ್ಯಾಲಯದಲ್ಲಿ ಸೂಮಾರು 100ಕ್ಕಿಂತ ಹೆಚ್ಚು ಮಕ್ಕಳಿಗೆ, ಪುಸ್ತಕ, ಪೆನ್ನು ಇತ್ಯಾದಿ ಮಕ್ಕಳ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ನಡೆಯಿತು. ದೈವದ ಪೂಜಾರಿ, ದೂಮ ಪೂಜಾರಿ ಸುಣ್ಣಾಡ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭೆಯಲ್ಲಿ ಪೈವಳಿಕೆ ಗ್ರಾಮ ಪಂಚಯತ್ ಸದಸ್ಯ ಝಕಾರಿಯ ಮುಳಿಗದ್ದೆ, ಬಿರುವೆರ್ ಕುಡ್ಲ(ರಿ) ಪೈವಳಿಕೆ ಘಟಕದ ಕಾರ್ಯದರ್ಶಿ ಕಸ್ತೂರಿ ಕಣಿಹಿತ್ತಿಲು, ಸಾಮಾಜಿಕ ಮುಂದಾಳು ರವಿ ಎಸ್ ಎಂ ಕುಕ್ಕಾಜೆ, ಪಿ.ಕೆ. ಅಶ್ರಫ್, ಗಣೇಶ್ ಸುಣ್ಣಾಡ, ಆನಂದ ಕುಡಾಲ್ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್ ಕಣಿಹಿತ್ತಿಲು ಸಾಗತಿಸಿ, ಚೈತ್ರ ಸ್ಥಾನದ ಮನೆ ವಂದಿಸಿದರು.

0 Comments