Ticker

6/recent/ticker-posts

Ad Code

ಕಾಸರಗೋಡು ವೈದ್ಯಕೀಯ ಕಾಲೇಜನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಮೊದಲ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಭರವಸೆ

 

ತಿರುವನಂತಪುರ : ಕಾಸರಗೋಡು ವೈದ್ಯಕೀಯ ಕಾಲೇಜನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಮೊದಲ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು  ಕಾಸರಗೋಡು ನಿಯುಕ್ತ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಅವರಿಗೆ ಭರವಸೆ ನೀಡಿದರು. ಅಭಿವೃದ್ಧಿ ಕ್ಷೇತ್ರದಲ್ಲಿ ಕಾಸರಗೋಡಿನ ನ್ಯೂನತೆಗಳು ಮತ್ತು ಅಗತ್ಯಗಳನ್ನು  ಕಲ್ಲಟ್ರ ಮಾಹಿನ್ ಹಾಜಿ ಅವರನ್ನೊಳಗೊಂಡ ತಂಡ  ಮುಖ್ಯಮಂತ್ರಿ ಮತ್ತು ಕೈಗಾರಿಕಾ ಸಚಿವ ಪಿ.ಕೆ. ಕುಂಜಾಲಿಕುಟ್ಟಿ ಅವರ ಗಮನಕ್ಕೆ ತಂದಿತ್ತು.

ಈ ಸಂದರ್ಭದಲ್ಲಿ ಮಾಜಿ ಶಾಸಕ. ಎನ್.ಎ. ನೆಲ್ಲಿಕುನ್ನು, ನ್ಯಾ.ಎ. ಗೋವಿಂದನ್ ನಾಯರ್, ಮಾಹಿನ್ ಕೇಳೋಟ್, ಎಂ.ಎ.ಎಚ್. ಮಹಮೂದ್, ಅನ್ವರ್ ಕೋಳಿಯಡ್ಕ ಮತ್ತು ಸಿದ್ದಿಕ್ ಪಳ್ಳಿಪ್ಪುಲ ಮೊದಲಾದವರು ಜತೆ ಗಿದ್ದರು.

Post a Comment

0 Comments